PM Modi: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿ ಮೋದಿಯವರು ಕೆಲವು ಮುಸ್ಲಿಂ(Muslim) ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮುಸ್ಲಿಂ ಮೀಸಲಾತಿ ವಿರುದ್ಧ ಮೋದಿ ಧ್ವನಿ ಎತ್ತಿದ್ದ ಕಾರಣ ಇದು ಇನ್ನೂ ಹೆಚ್ಚು ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಮೋದಿ ಕೂಡ ನಾನು ಹಿಂದೂ-ಮುಸ್ಲಿಂ(Hindu-Muslim) ಮೇಲೆ ರಾಜಕೀಯ ಮಾಡಿದರೆ ಸಾರ್ವಜನಿಕರ ಬದುಕಿಗೆ ಅರ್ಹನಲ್ಲ ಎಂದು ಹೇಳಿದ್ದಾರೆ. ಇದರ ನಡುವೆ ಕೆಲ ಮುಸ್ಲಿಂ ನಾಯಕರು ಮೋದಿ(PM Modi) ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Mangaluru: ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿನಿಯರ ಪ್ರಥಮ ಪಿಯುಸಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
ಶಾನವಾಜ್ ಹುಸೈನ್, ಬಿಜೆಪಿ ವಕ್ತಾರ:
ಮೋದಿ ದೇಶದ 140 ಕೋಟಿ ಜನರನ್ನೂ ಒಂದೇ ಎಂದು ಪರಿಗಣಿಸಿದವರು. ಅವರ ವಿರುದ್ಧ ‘ಹಿಂದೂ- ಮುಸ್ಲಿಂ’ ಆರೋಪ ಮಾಡಿದ್ದು ವಿರೋಧ ಪಕ್ಷದವರು. ಮಾಡೋದೆಲ್ಲಾ ಮಾಡಿ ಇದೀಗ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದೇಶಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದ, ದುಡಿಯುತ್ತಿರುವ ಪ್ರಧಾನಿಗಳಲ್ಲಿ ಮೋದಿ ಮೊದಲಿಗರು.
ಇದನ್ನೂ ಓದಿ: Udupi: ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಲಾರೆ ,ದುಡುಕಿನ ನಿರ್ಧಾರವಲ್ಲ ಯೋಚಿಸಿಯೇ ನಿರ್ಧರಿಸಿದ್ದೇನೆ – ರಘುಪತಿ ಭಟ್
ಮುಖ್ತಾರ್ ಅಬ್ಬಾಸ್ ನಖಿ, ಮಾಜಿ ಕೇಂದ್ರ ಸಚಿವ:
ಮೋದಿ ಅವರು ಒಂದು ವರ್ಗದ ಓಲೈಕೆಯನ್ನು ಅಂತ್ಯಗೊಳಿಸಿದರು. ಅವರ ಯೋಜನೆಗಳಿಂದ ಎಲ್ಲ ಜಾತಿ, ವರ್ಗ, ಧರ್ಮದವರೂ ಅನುಕೂಲ ಪಡೆದಿದ್ದಾರೆ, ಪಡೆಯುತ್ತಿದ್ದಾರೆ. ದೇಶ ಅವರ ಕಾಲದಲ್ಲಿ ಸುಭಧ್ರವಾಗಿದೆ. ಕೋಮು-ದ್ವೇಷಗಳ ಮಟ್ಟಹಾಕುತ್ತಿದ್ದಾರೆ.
ತಾನು ಹಿಂದೂ ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ ಇತರೆ ವಿಷಯಗಳನ್ನು ಬಿಟ್ಟು ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದ್ದು, ‘ಮಟನ್-ಚಿಕನ್’, ‘ಹಿಂದೂ-ಮುಸ್ಲಿಂ’ ಎಂದಿರುವುದು ಅವರೇ ಹೊರತು ನಾವಲ್ಲ ಎಂದು ಹೇಳಿದ್ದಾರೆ.
