Things To Tulsi: ಹಿಂದೂ ಸಂಪ್ರದಾಯದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ಪ್ರತಿದಿನ ಪೂಜಿಸುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಇನ್ನು ತುಳಸಿ ಗಿಡ ನೆಡುವುದರಿಂದ, ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ಮನೆಯಲ್ಲಿ ಸಂತೋಷವು ಬರಲು ಪ್ರಾರಂಭಿಸುತ್ತದೆ ಎನ್ನಲಾಗುತ್ತದೆ. ಮುಖ್ಯವಾಗಿ ತುಳಸಿ ಗಿಡವು ವಿಷ್ಣು ಮತ್ತು ಲಕ್ಷ್ಮಿ ದೇವಿಯ ರೂಪವಾಗಿದೆ. ಆದ್ದರಿಂದ ತುಳಸಿಯನ್ನು ಪೂಜಿಸುವ ಮೂಲಕ, ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.
ಇದನ್ನೂ ಓದಿ: Kitchen Hacks: ಒಂದು ಬಾರಿ ಬಳಸಿದ ಅಡುಗೆ ಎಣ್ಣೆಯನ್ನು ಪುನಃ ಯೂಸ್ ಮಾಡಬಹುದಾ?
ಶಾಸ್ತ್ರ ಪ್ರಕಾರ ನೀವು ತುಳಸಿ ಗಿಡಕ್ಕೆ ಈ 4 ವಸ್ತುಗಳನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿಯು ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ ಹಾಗೂ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಮಳೆಯನ್ನು ಸುರಿಸುತ್ತಾಳೆ.
ಇದನ್ನೂ ಓದಿ: Bangalore Women Death: ಬಾತ್ ರೂಮ್ ಗೆ ಹೋದ ಯುವತಿ ವಾಪಸ್ ಬಾರದೆ ಅನುಮಾನಾಸ್ಪದ ಸಾವು : ರಕ್ತದ ಮಡುವಿನಲ್ಲಿ ಯುವತಿ ಶವ ಪತ್ತೆ
ತುಪ್ಪದ ದೀಪ:
ಮುಂಜಾನೆ ಮತ್ತು ಸಂಜೆ ಎರಡೂ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಬೆಳಗಿಸಿ. ತಾಯಿ ತುಳಸಿ ಇದರಿಂದ ಸಂತಸಗೊಂಡು ನಿಮ್ಮನ್ನು ಆಶೀರ್ವದಿಸುತ್ತಾಳೆ ಮತ್ತು ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.
ತಾಮ್ರದ ಪಾತ್ರೆಯಲ್ಲಿ ನೀರು:
ನೀವು ತುಳಸಿ ದೇವಿಗೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಕೆಲವು ಗಂಟೆಗಳ ಕಾಲ ಇರಿಸಿ. ಅದರಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಆ ನೀರನ್ನು ಅರ್ಪಿಸಬೇಕು. ಸಸ್ಯದ ಮೇಲೆ ಹಸಿ ಹಾಲು ಅಥವಾ ಕಬ್ಬಿನ ರಸ ಇದ್ದರೆ, ನೀರನ್ನು ನೀಡುವ ಮುನ್ನ ಅದನ್ನು ತೆಗೆದು ಹಾಕಿ ನಂತರ ನೀರನ್ನು ಅರ್ಪಿಸಿ.
ಹಸಿ ಹಾಲು:
ಗುರುವಾರ ಮತ್ತು ಶುಕ್ರವಾರದ ದಿನದಂದು ತುಳಸಿ ಗಿಡಕ್ಕೆ ಹಸುವಿನ ಶುದ್ಧವಾದ ಹಸಿ ಹಾಲನ್ನು ಅರ್ಪಿಸಬೇಕು. ತುಳಸಿಗೆ ಹಸಿ ಹಾಲನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಕಬ್ಬಿನ ರಸ:
ತುಳಸಿ ಗಿಡಕ್ಕೆ ಕಬ್ಬಿನ ರಸವನ್ನು ಅರ್ಪಿಸಿ ಪೂಜಿಸುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ. ಹಾಗೂ ಆರ್ಥಿಕ ತೊಂದರೆ ನೀಗಿಸುತ್ತಾಳೆ ಎನ್ನುವ ನಂಬಿಕೆಯಿದೆ. ತುಳಸಿಗೆ ಕಬ್ಬಿನ ರಸವನ್ನು ಅರ್ಪಿಸಿದ ನಂತರ ಆಕೆಯನ್ನು ತಪ್ಪದೇ ಪೂಜಿಸಿ.
ಸುಮಂಗಲಿಯರು ಬಳಸುವ ವಸ್ತುಗಳು:
ತುಳಸಿ ದೇವಿಗೆ ಅಥವಾ ತುಳಸಿ ಗಿಡಕ್ಕೆ ಸುಮಂಗಲಿಯರು ಬಳಸುವ ವಸ್ತುಗಳನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡವನ್ನು ಚುನರಿಯಿಂದ ಮುಚ್ಚಿ ನಂತರ ಗಿಡಕ್ಕೆ ಅರಿಶಿನ, ಕುಂಕುಮ ಮತ್ತು ಗಂಧವನ್ನು ಅರ್ಪಿಸಬೇಕು. ಇದರಿಂದ ತುಳಸಿ ದೇವಿ ಸಂತುಷ್ಟಳಾಗಿ ಆಶೀರ್ವಾ
ದ ನೀಡುತ್ತಾಳೆ.
