Home » Brutal Murder: ಮನೆಯಲ್ಲಿ ಹೆಚ್ಚು ಮಕ್ಕಳಿದ್ದಾರೆಂದು ಚಿಂತೆ ಮಾಡುತ್ತಿದ್ದ ತಂದೆ; ಇಬ್ಬರನ್ನು ಕತ್ತು ಹಿಸುಕಿ ಕೊಂದೇ ಬಿಟ್ಟ ಅಕ್ಕ

Brutal Murder: ಮನೆಯಲ್ಲಿ ಹೆಚ್ಚು ಮಕ್ಕಳಿದ್ದಾರೆಂದು ಚಿಂತೆ ಮಾಡುತ್ತಿದ್ದ ತಂದೆ; ಇಬ್ಬರನ್ನು ಕತ್ತು ಹಿಸುಕಿ ಕೊಂದೇ ಬಿಟ್ಟ ಅಕ್ಕ

1 comment
Brutal Murder

Brutal Murder: 13 ವರ್ಷದ ಬಾಲಕಿಯೊಬ್ಬಳು ತನ್ನ ಇಬ್ಬರು ತಂಗಿಯರನ್ನು ಕತ್ತು ಹಿಸುಕಿ ಕೊಂದಿರುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಐದು ಮಕ್ಕಳನ್ನು ಹೊಂದಿರುವುದರ ಕುರಿತು ತಂದೆ ಚಿಂತಿತರಾಗಿರುವುದನ್ನು ನೋಡಿ ಈಕೆ ಈ ರೀತಿ ಮಾಡಿದ್ದಾಳೆ.

ಇದನ್ನೂ ಓದಿ: New Law implementation: ಜುಲೈ 1 ರಿಂದ ದೇಶದಾದ್ಯಂತ ಮೂರು ಹೊಸ ಕಾನೂನು ಜಾರಿ : ಅವು ಯಾವುವು ಗೊತ್ತಾ? : ಇಲ್ಲಿ ನೋಡಿ

ಗುರುವಾರ ತಡರಾತ್ರಿ 12.30 ರ ಸುಮಾರಿಗೆ ನೂರ್‌ಪುರ್‌ ಪೊಲೀಸ್‌ ಠಾಣೆಗೆ ಗೌಹಾವರ್‌ ಜೈತ್‌ ಗ್ರಾಮದ ಮನೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ.

ರಿತು (7), ಪವಿತ್ರಾ (5) ಹತ್ಯೆಯಾದ ಸಹೋದರಿಯರು. ಸಹದೇವ್‌ ಮತ್ತು ಸವಿತಾ ದಂಪತಿ ತಮ್ಮ ಐದು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಇವರಿಗೆ 13,9 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಸವಿತಾ ಅವರ ಮೊದಲ ಪತಿ ಪುಖರಾಜ್‌ನ ಮಕ್ಕಳು. ಹತ್ಯೆಯಾದ ಇಬ್ಬರು ಬಾಲಕಿಯರು ಮತ್ತು 1.5 ವರ್ಷದ ಗಂಡು ಮಗು ಆಕೆಯ ಎರಡನೇ ಪತಿ ಸಹದೇವ್‌ನ ಮಕ್ಕಳು.

ಇದನ್ನೂ ಓದಿ: H D Devegowda: ಪ್ರಜ್ವಲ್ ಓಕೆ, ರೇವಣ್ಣ ಯಾಕೆ? ಕೊನೆಗೂ ಮೌನ ಮುರಿದ ದೊಡ್ಡ ಗೌಡರ !!

13 ವರ್ಷದ ಬಾಲಕಿ ಮೊದಲು ವಿಚಾರಣೆ ಮಾಡಿದಾಗ ಅಪರಿಚಿತರು ತಮ್ಮ ಮನೆಗೆ ನುಗ್ಗಿ ಸಹೋದರಿಯರನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಹೇಳಿದ್ದಳು ಎನ್ನಲಾಗಿದೆ.

ಆದರೆ ಆಕೆ ನಂತರ ತಂದೆ ಕುಟುಂಬದಲ್ಲಿ ಹೆಚ್ಚು ಸದಸ್ಯರಿರುವ ಕುರಿತು ಚಿಂತಿತರಾಗಿದ್ದರಿಂದ ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವ ಕಳುಹಿಸಲಾಗಿದ್ದು, ಅಪ್ರಾಪ್ತ ಬಾಲಕಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment