Home » Dakshina Kannada: ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿ ಬಳಿಯೇ ಭಿಕ್ಷೆ ಬೇಡಿದ ವೃದ್ಧ ಭಿಕ್ಷುಕ, ಎಷ್ಟು ದುಡ್ಡು ಕೊಟ್ಟರು ಜಿಲ್ಲಾಧಿಕಾರಿ ?

Dakshina Kannada: ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿ ಬಳಿಯೇ ಭಿಕ್ಷೆ ಬೇಡಿದ ವೃದ್ಧ ಭಿಕ್ಷುಕ, ಎಷ್ಟು ದುಡ್ಡು ಕೊಟ್ಟರು ಜಿಲ್ಲಾಧಿಕಾರಿ ?

by ಹೊಸಕನ್ನಡ
1 comment
Dakshina Kannada

Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಕಾರಿ ಕೆಲಸಕ್ಕಾಗಿ ಕರ್ತವ್ಯದ ಮೇಲೆ ಬಂದಿದ್ದ ಜಿಲ್ಲಾಧಿಕಾರಿ ಬಳಿಯೇ ಬಿಕ್ಷುಕನೊಬ್ಬ ಬಿಕ್ಷಾಟನೆ ಮಾಡಿದ ಘಟನೆ ನಡೆದಿದೆ. ಕಾರಿನಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿಯ ಮುಂದೆಯೇ ತಟ್ಟೆ ಇಟ್ಟು ಭಿಕ್ಷೆ ಕೇಳಿದ್ದಾನೆ ಭಿಕ್ಷುಕ.

ಇದನ್ನೂ ಓದಿ: ಕಡಬ : ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಶಿಕ್ಷಕಿ ಮೃತ್ಯು

ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಆಗಮಿಸಿದ್ದರು. ಈ ವೇಳೆ ಭಿಕ್ಷುಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಮುಂದೆ ಏಕಾಏಕಿ ಭಿಕ್ಷುಕನೊಬ್ಬ ಪ್ರತ್ಯಕ್ಷನಾಗಿದ್ದಾನೆ. ಜಿಲ್ಲಾಧಿಕಾರಿ ಮುಂದೆ ಕೈಚಾಚಿ ಭಿಕ್ಷಾಟನೆ ಮಾಡಿದ್ದಾರೆ.

ತಮ್ಮ ಕಾರಿನಲ್ಲಿ ತಾವು ಕುಳಿತಿದ್ದಾಗ ಪಕ್ಕದಲ್ಲಿ ಯಾರೋ ಬಂದು ನಿಂತುದನ್ನು ಜಿಲ್ಲಾಧಿಕಾರಿಯವರು ಮೊದಲಿಗೆ ಗಮನಿಸಿಲ್ಲ. ನಂತರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಾರಿನಲ್ಲಿ ಕುಳಿತಿದ್ದಾಗ ಪೊದೆ ಗಡ್ಡದ ವೃದ್ಧ ಭಿಕ್ಷುಕ ಕೈ ಕಾಚಿದ್ದಾನೆ, ಭಿಕ್ಷುಕನ ಕಂಡ ಜಿಲ್ಲಾಧಿಕಾರಿ ಕೈಮುಗಿದು ನಮಸ್ಕರಿಸಿದ್ದಾರೆ. ಜತೆಗೆ ಭಿಕ್ಷುಕನಿಗೆ ಕೈಸನ್ನೆಯ ಮೂಲಕವೇ ಇಲ್ಲ ಎಂದು ಸೂಚಿಸಿದ್ದಾರೆ. ನಂತರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಾರು ಮುಂದೆ ಸಾಗಿದೆ.

ಇದನ್ನೂ ಓದಿ: Mysore: ಉಳುಮೆ ಮಾಡುವಾಗ ಟ್ರಾಕ್ಟರ್ ನಿಂದ ಬಿದ್ದು ರೋಟಾ ವೆಲ್ಟರ್ ಗೆ ಸಿಲುಕಿದ ಬಾಲಕ ಮೃತ್ಯು

You may also like

Leave a Comment