Home » Viral News: ಮೇಲಿಂದ ಬಿದ್ದ ಮಗುವನ್ನು ರಕ್ಷಣೆ ಮಾಡಿದ ವಾರಗಳ ನಂತರ ಇದೀಗ ತಾಯಿ ಸುಸೈಡ್‌; ಕಾರಣವೇನು?

Viral News: ಮೇಲಿಂದ ಬಿದ್ದ ಮಗುವನ್ನು ರಕ್ಷಣೆ ಮಾಡಿದ ವಾರಗಳ ನಂತರ ಇದೀಗ ತಾಯಿ ಸುಸೈಡ್‌; ಕಾರಣವೇನು?

1 comment
Viral News

Viral News: ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ವಿಂಡೋ ಪೋರ್ಚ್‌ವೊಂದರ ಮೇಲೆ ಏಳು ತಿಂಗಳ ಮಗು ಬಿದ್ದು, ಅನಂತರ ಸ್ಥಳೀಯರ ಸಹಾಯದಿಂದ ಮಗುವನ್ನು ಬದುಕಿಸಲಾಗಿತ್ತು. ಇದರ ವೀಡಿಯೋ ಕೂಡಾ ವೈರಲ್‌ ಆಗಿತ್ತು. ಆದರೆ ಇದೀಗ ಈ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Rishi sunak: ಸಂಪತ್ತಿನಲ್ಲಿ ಬ್ರಿಟನ್ ರಾಜನನ್ನು ಮೀರಿಸಿದ ಸುನಕ್ ದಂಪತಿ! : ಅಸಲಿಗೆ ಇವರ ಆಸ್ತಿ ಮೌಲ್ಯ ಎಷ್ಟು ಗೊತ್ತ? :  ಗೊತ್ತಾದ್ರೆ ಶಾಕ್ ಆಗ್ತೀರ!

ಕೊಯಂಬತ್ತೂರಿನ ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ತಾಯಿಯ ಮಡಿಲಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು.

ಇದನ್ನೂ ಓದಿ: School Fees Hike: 30% ವರೆಗೆ ಶುಲ್ಕ ಏರಿಸಲು ಮುಂದಾದ ಖಾಸಗಿ ಶಾಲೆಗಳು !!

ಈ ಘಟನೆ ನಂತರ ಮಗುವಿನ ತಾಯಿ ರಮ್ಯಾ ಅವರು ತುಂಬಾ ಖಿನ್ನತೆಗೊಳಗಾಗಿದ್ದರು. ನನ್ನ ಅಜಾಗರೂಕತೆಯಿಂದ ಈ ದುರಂತ ಸಂಭವಿಸಿತು ಎಂದು ಪದೇ ಪದೇ ಹೇಳುತ್ತಿದ್ದ ಕಾರಣ, ಜೊತೆಗೆ ನೆರೆಹೊರೆಯವರು, ನೆಟ್ಟಿಗರು ಈ ಘಟನೆ ಬಗ್ಗೆ ತಿಳಿದವರು ರಮ್ಯಾಳ ಅಜಾಗರೂಕತೆಯಿಂದ ಇದು ನಡೆದಿದೆ ಎಂದು ದೂರುತ್ತಿದ್ದರು ಎನ್ನಲಾಗಿದೆ. ಹಾಗಾಗಿ ರಮ್ಯಾ ತೀರಾ ನೊಂದು ಹೋಗಿದ್ದರು. ಇದನ್ನು ಗಮನಿಸಿದ ರಮ್ಯಾ ಅವರ ಗಂಡ ವೆಂಕಟೇಶ್‌ ಅವರು ಕೊಯಂಬತ್ತೂರ್‌ನಲ್ಲಿರುವ ಆಕೆಯ ತವರು ಮನೆಗೆ ಬಿಟ್ಟು ಬಂದಿದ್ದರು.

ಆದರೆ ರಮ್ಯಾ ಅವರು ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಮನೆ ಮಂದಿ ವಾಪಾಸು ಬರುವಾಗ ಪ್ರಜ್ಞೆ ತಪ್ಪಿ ಬಿದ್ದ ರಮ್ಯಾರನ್ನು ಮನೆಯವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಲ್ಲಿ ಆಕೆಯ ಕೊನೆಯುಸಿರೆಳೆದಿದ್ದಾಳೆ.

ಈ ಕುರಿತು ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You may also like

Leave a Comment