Home » Prajwal Revanna: ಮ್ಯೂನಿಕ್‍ನಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ !!

Prajwal Revanna: ಮ್ಯೂನಿಕ್‍ನಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ !!

0 comments
Prajwal Revanna

Prajwal Revanna: ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ವಿಡಿಯೋ ಮೂಲಕ ಮೇ 31ಕ್ಕೆ ಭಾರತಕ್ಕೆ ಬಂದು ಸೆರೆಂಡರ್ ಆಗುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮ್ಯೂನಿಕ್‍ನಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ.

ಹೌದು, ಸೋಮವಾರವಷ್ಟೇ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ (SIT) ಮುಂದೆ ಹಾಜರಾಗಿ ಉತ್ತರ ನೀಡುತ್ತೇನೆ. ಅಷ್ಟೇ ಅಲ್ಲದೇ ಕುಟುಂಬಸ್ಥರು ಮತ್ತು ರಾಜ್ಯದ ಜನತೆಯಲ್ಲಿ ಪ್ರಜ್ವಲ್‌ ರೇವಣ್ಣ ಕ್ಷಮೆ ಕೇಳಿದ್ದರು. ಅಂತೆಯೇ ಇದೀಗ ಅವರು ಭಾರತಕ್ಕೆ ಬರುವ ತಯಾರಿ ನಡೆಸಿದ್ದು, ಟಿಕೆಟ್ ಬುಕ್ ಮಾಡಿದ್ದಾರೆ.

ಈಗಾಗಲೇ ಮ್ಯೂನಿಕ್‍ನಿಂದ ಬೆಂಗಳೂರಿಗೆ(Bengaluru) ಬರೋಕೆ ಪ್ರಜ್ವಲ್ ರೇವಣ್ಣ ಅವರು ಲುಫ್ತಾನ್ಸಾ ಏರ್‌ಲೈನ್ಸ್ ಬುಕ್ ಮಾಡಿದ್ದಾರೆ. ಮೇ 31ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬರ್ತಿದ್ದಂತೆ ಏರ್ ಪೋರ್ಟ್‍ನಲ್ಲೇ ಲಾಕ್ ಆಗುವ ಸಾಧ್ಯತೆಗಳಿವೆ.

You may also like

Leave a Comment