Home » Amroha Deadly Accident: ಹುಟ್ಟುಹಬ್ಬ ಮುಗಿಸಿ ಬರುವಾಗ ಭೀಕರ ಅಪಘಾತ; ನಾಲ್ವರು ಯೂಟ್ಯೂಬರ್‌ಗಳ ದಾರುಣ ಸಾವು

Amroha Deadly Accident: ಹುಟ್ಟುಹಬ್ಬ ಮುಗಿಸಿ ಬರುವಾಗ ಭೀಕರ ಅಪಘಾತ; ನಾಲ್ವರು ಯೂಟ್ಯೂಬರ್‌ಗಳ ದಾರುಣ ಸಾವು

0 comments
Amroha Deadly Accident

Amroha Deadly Accident: ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿ ವಾಪಾಸ್ಸಾಗುವ ಸಂದರ್ಭದಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಯೂಟ್ಯೂಬರ್‌ಗಳು ಮೃತಪಟ್ಟ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.

ಸರ್ಕಾರದಿಂದ ಮಹಿಳೆಯರಿಗೆ ಐದು ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ!ಇಲ್ಲಿದೆ ಸಂಪೂರ್ಣ ವಿವರ!

ಲಕ್ಕಿ, ಸಲ್ಮಾನ್‌, ಶಾರುಖ್‌, ಶಾನವಾಜ್‌ ನಾಲ್ವರು ಮೃತ ಯೂಟ್ಯೂಬರ್‌ಗಳೆಂದು ಗುರುತಿಸಲಾಗಿದೆ.

ಮೃತಪಟ್ಟ ನಾಲ್ವರೂ ಯೂಟ್ಯೂಬರ್‌ಗಳಾಗಿದ್ದು ರೌಂಡ್‌ 2 ವರ್ಲ್ಡ್‌ ಚಾನೆಲ್‌ನಲ್ಲಿ ಹಾಸ್ಯ ವಿಷಯಕ್ಕೆ ಸಂಬಂಧಿಸಿದ ಕುರಿತು ವರದಿ ಮಾಡುತ್ತಿದ್ದರು.

ಬರ್ತ್‌ಡೇ ಪಾರ್ಟಿ ಮುಗಿಸಿ ಕಾರಿನಲ್ಲಿ ಮನೆಗೆ ವಾಪಾಸ್ಸಾಗವ ವೇಳೆ ಎದುರುಗಡೆಯಿಂದ ಬರುತ್ತಿದ್ದ ಬೊಲೆರೋ ಕಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಎರಡೂ ಕಾರಿನಲ್ಲಿದ್ದವರು ಗಾಯಗೊಂಡಿದ್ದು, ಸಾರ್ವಜನಿಕರು ಪೊಲೀಸರು ಮಾಹಿತಿ ನೀಡಿದ್ದರು.

ನಂತರ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದವರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವೇಳೆ ವೈದ್ಯರು ನಾಲ್ವರು ಯುವಕರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

“ಭಾನುವಾರ ರಾತ್ರಿ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮನೋಟಾ ಸೇತುವೆಯ ಬಳಿ ಅಪಘಾತ ಸಂಭವಿಸಿದ್ದು, ಎರಡು ಕಾರುಗಳು ಅತಿವೇಗದಿಂದ ಡಿಕ್ಕಿ ಹೊಡೆದಿದೆ. ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಂದು ಕಾರಿನಲ್ಲಿ ಸವಾರಿ ಮಾಡುತ್ತಿದ್ದ ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ,” ಹಸನ್‌ಪುರ. ವೃತ್ತ ಅಧಿಕಾರಿ (ಸಿಒ) ದೀಪ್ ಕುಮಾರ್ ಪಂತ್ ಹೇಳಿದ್ದಾರೆ.

ಈ ಅಪಘಾತದಲ್ಲಿ ಕೆಲವು ಮಂದಿ ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಮ್ರೋಹಾ ಜಿಲ್ಲಾ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದೊಯ್ಯಲಾಗಿದ್ದು, ಮೃತರನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Teachers Recruitment : ಅತಿಥಿ ಶಿಕ್ಷಕರು-ಅತಿಥಿ ಉಪನ್ಯಾಸಕರ ನೇಮಕ; ಈಗಲೇ ಅರ್ಜಿ ಸಲ್ಲಿಸಿ, ವೇತನ ವಿವರ ಇಲ್ಲಿದೆ

You may also like

Leave a Comment