Home » Darshan-Pavithra Gowda: ದರ್ಶನ್‌ ಗೆಳತಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ

Darshan-Pavithra Gowda: ದರ್ಶನ್‌ ಗೆಳತಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ

0 comments
Darshan-Pavithra Gowda

Darshan-Pavithra Gowda: ಪೊಲೀಸರು ನಟ ದರ್ಶನ್‌ ಅವರನ್ನು ಬಂಧಿಸಿದ ಪ್ರಕರಣಕ್ಕೆ ಕುರಿತಂತೆ ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಬೆಂಗಳೂರಿನಲ್ಲಿ ನಟ ದರ್ಶನ್‌ ಪರಮಾಪ್ತೆ ಗೆಳತಿ ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೌದು, ಆರ್‌.ಆರ್‌.ನಗರ ಠಾಣೆಯ ಪೊಲೀಸರು ಪವಿತ್ರಾ ಗೌಡಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Actor Darshan: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನ

ಆರ್‌ಆರ್‌ನಗರ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಾರ್ಕಂಡಯ್ಯ ಅವರು ಪವಿತ್ರಾ ಗೌಡಳನ್ನು ವಶಕ್ಕೆ ಪಡೆದಿದ್ದು, ಅನಂತರ ಕಾಮಾಕ್ಷಿ ಪಾಳ್ಯ ಪೊಲೀಸ್‌ ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದಾರೆ.

Actor Darshan Arrest: ನಟ ದರ್ಶನ್‌ ಅರೆಸ್ಟ್‌; ಕೊಲೆ ಮಾಡಿದ್ದು ಹೇಗೆ? ದರ್ಶನ್‌ ಮನೆಗೆ ಬಿಗಿ ಭದ್ರತೆ

ಮೈಸೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ನಟ ದರ್ಶನ್‌ ವಿಚಾರಣೆ ನಡೆಯುತ್ತಿದೆ.

ಕೊಲೆಯಾದ ರೇಣುಕಾಸ್ವಾಮಿ ದರ್ಶನ್‌ ಅಭಿಮಾನಿ ಎಂಬ ಮಾಹಿತಿ ದೊರಕಿದೆ ಎನ್ನಲಾಗಿದೆ.

ನಟ ದರ್ಶನ್‌ ಸೇರಿದಂತೆ ಪಟ್ಟಣಗೆರೆ ಜಯಣ್ಣ ಪುತ್ರ ವಿನಯ್‌, ಕಿರಣ್‌, ಮಧು, ಲಕ್ಷಣ್‌, ಆನಂದ್‌, ರಾಘವೇಂದ್ರ ಸೇರಿ 10 ಜನರ ಬಂಧನವಾಗಿದೆ. ಇತ್ತ ಬೆಂಗಳೂರಿನಲ್ಲಿ ದರ್ಶನ್‌ ಗೆಳತಿ ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

You may also like

Leave a Comment