Home » Sridevi Byrappa: ಯುವ ರಾಜ್‌ಕುಮಾರ್‌ ಆಸ್ತಿ ಹಣ ಬೇಡ- ಶ್ರೀದೇವಿ ಲಾಯರ್‌

Sridevi Byrappa: ಯುವ ರಾಜ್‌ಕುಮಾರ್‌ ಆಸ್ತಿ ಹಣ ಬೇಡ- ಶ್ರೀದೇವಿ ಲಾಯರ್‌

0 comments
Sridevi Byrappa

Sridevi Byrappa: ಶ್ರೀದೇವಿ ಬೈರಪ್ಪ ಅವರು ಯಾವುದೇ ರೀತಿಯಲ್ಲಿ ಹಣ ಮತ್ತು ಆಸ್ತಿಗೆ ಆಸೆ ಪಡುತ್ತಿಲ್ಲ. ಆಕೆ ವಿದ್ಯಾವಂತೆ, ಎಲ್ಲವನ್ನೂ ಆಕೆ ಮ್ಯಾನೇಜ್‌ ಮಾಡುತ್ತಿದ್ದಾರೆ ಎಂದು ಲಾಯರ್‌ ಹೇಳಿದ್ದಾರೆ. ಪ್ರೀತಿಸಿ ಮದುವೆಯಾಗಿ ಜೀವ ನಡೆಸಿರುವ ಯುವ ರಾಜ್‌ ಕುಮಾರ್‌ ಇದ್ದಕ್ಕಿದ್ದಂತೆ ವಿಚ್ಛೇದನ ಬೇಕೆಂದು ನೋಟಿಸ್‌ ಕಳುಹಿಸಲು ಕಾರಣವೇನು? ಅಲ್ಲದೇ ಶ್ರೀದೇವಿ ಅವರ ತಂದೆ ಭೈರಪ್ಪನವರು ಕೂಡಾ ಸ್ಪಷ್ಟವಾಗಿ ಹೇಳಿದ್ದಾರೆ ನಮಗೆ ಅವರಿಂದ ಯಾವ ಹಣ ಕೂಡಾ ಬೇಕಿಲ್ಲ ಎಂದು” ಎಂದು ಶ್ರೀದೇವಿ ಭೈರಪ್ಪ ಲಾಯರ್‌ ದೀಪ್ತಿ ಆಯಾಥಾನ್‌ ಮಾತನಾಡಿದ್ದಾರೆ.

Mangaluru/Surathkal: ಪ್ರಥಮ ಪಿಯುಸಿಯ ಮಕ್ಕಳ ಪೋಷಕರಿಗೆ ನಕಲಿ ಕರೆ, ಹಣಕ್ಕೆ ಬೇಡಿಕೆ

ಆಕೆಗೆ ಪರೀಕ್ಷೆ ಇರುವ ಸಮಯದಲ್ಲಿ ನೋಟಿಸ್‌ ಕಳುಹಿಸಿದ್ದಾರೆ. ಹಾರ್ವರ್ಡ್‌ ಅಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದುತ್ತಿರುವಾಗ ಪರೀಕ್ಷೆ ಇರುವ ಸಮಯದಲ್ಲಿ ನೋಟಿಸ್‌ ಕೊಟ್ಟಿದ್ದಾರೆ. ಡಿಸೆಂಬರ್‌ ವರೆಗೆ ಊಟ ಆಯಿತಾ ಮಗಳೇ ಎಂದು ಮೆಸೇಜ್‌ ಬಂದಿದೆ ಆಮೇಲೆ ಎಲ್ಲಾ ಸ್ಟಾಪ್‌ ಆಗಿದೆ ಎಂದು ಲಾಯರ್‌ ಹೇಳಿದ್ದಾರೆ.

ಪ್ರೀತಿಯಿಂದ ಯುವ ಮಾತನಾಡಿಸಿರುವ ಪ್ರತಿಯೊಂದು ಮೆಸೇಜ್‌ ಡಿಸೆಂಬರ್‌ವರೆಗೂ ಇದೆ. ಅವರು ಮೊದಲು ನೋಟಿಸ್‌ ಕೊಟ್ಟಿರುವ ಕಾರಣ ಶ್ರೀದೇವಿ ಅವರು ಅದಕ್ಕೆ ಉತ್ತರ ಕೊಟ್ಟಿದ್ದಾರೆ ಅಷ್ಟೇ. ಡಿವೋರ್ಸ್‌ ಕೊಡ್ತೀನಿ ಎಂದು ಶ್ರೀದೇವಿ ಹೇಳಿಲ್ಲ. ಎಲ್ಲಾ ಅವರೇ ಕೇಳಿರುವುದು ಎಂದು ಶ್ರೀದೇವಿ ಪರ ಲಾಯರ್‌ ಹೇಳಿದ್ದಾರೆ.

Gruhalakshmi Scheme: ಇನ್ಮುಂದೆ ಇವರಿಗೂ ಸಿಗಲಿದೆ ಗೃಹಲಕ್ಷ್ಮೀ ಯೋಜನೆಯ 2000 ರೂ!

You may also like

Leave a Comment