Home » Darshan: ‘ದಮ್ಮಯ್ಯ ಅಂತೀನಿ ನನ್ನ ಬಿಟ್ಟು ಬಿಡಿ ಸಾರ್, ಪ್ಲೀಸ್’ – ಸೊಕ್ಕೆಲ್ಲ ಅಡಗಿ ಪೋಲೀಸರ ಕಾಲು ಹಿಡಿದ ದರ್ಶನ್ !!

Darshan: ‘ದಮ್ಮಯ್ಯ ಅಂತೀನಿ ನನ್ನ ಬಿಟ್ಟು ಬಿಡಿ ಸಾರ್, ಪ್ಲೀಸ್’ – ಸೊಕ್ಕೆಲ್ಲ ಅಡಗಿ ಪೋಲೀಸರ ಕಾಲು ಹಿಡಿದ ದರ್ಶನ್ !!

0 comments
Darshan

Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ(Renukaswamy Murder Case) ಬಂಧನವಾಗಿರುವ ನಟ ದರ್ಶನ್ ಮಾಡಿರೋ ಕಿತಾಪತಿಗಳು ಒಂದೋ ಎರಡೋ? ಅಬ್ಬಬ್ಬಾ..!! ಪ್ರತೀ ದಿನವೂ ಒಂದೊಂದು ಹಳೆಯ ಪ್ರಕರಣಗಳು ಬಯಲಾಗುತ್ತಿವೆ. ಬಗೆದಷ್ಟು ಆಳವಾಗುತ್ತಿವೆ. ಈ ಬೆನ್ನಲ್ಲೇ ನಾನು ಏನು ಮಾಡಿದರೂ ನಡೆಯುತ್ತದೆ, ಕನ್ನಡ ಇಂಡಸ್ಟ್ರಿಯೇ ನನ್ನಿಂದ ಎಂದು ಮರೆಯುತ್ತಿದ್ದ ದರ್ಶನ್(Darshan) ಅಹಂಕಾರ ಮಣ್ಣಲ್ಲಿ ಮಣ್ಣಾಗಿ ಹೋಗಿದೆ.

 ವಯನಾಡು ಸಂಸದ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ !!ಕಾರಣ ಹೀಗಿದೆ

ಕೊಲೆ ಪ್ರಕರಣದಲ್ಲಿ ಕಳೆದೊಂದು ವಾರದಿಂದಲೂ ಪೋಲೀಸ್ ಅತಿಥಿಯಾಗಿರುವ ನಟ ದರ್ಶನ್ ಸೊಕ್ಕೆಲ್ಲಾ ಅಡಗಿದೆ. ಯಾವ ಅಭಿಮಾನಿಯೂ ನನ್ನನ್ನು ಕಾಪಾಡಲಾಗದು, ಕಾನೂನಿನ ಮುಂದೆ ನಾನು ಏನೂ ಅಲ್ಲ ಎಂಬ ಎಲ್ಲದೂ ಅರಿವಾಗಿದೆ. ಯಾಕೆಂದರೆ ಕೊಲೆಯಲ್ಲಿ ದರ್ಶನ್ ಪಾತ್ರ ದೊಡ್ಡದಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿದೆ ಎಂಬ ಆರೋಪಗಳ ನಡುವೆ ಇದೀಗ ದರ್ಶನ್ ಪೊಲೀಸರ ಕಾಲು ಹಿಡಿದು ‘ದಯಮ್ಮಯ್ಯಾ ನನ್ನ ಬಿಟ್ಟುಬಿಡಿ ಸಾರ್…!! ಎಂದು ಬೇಡಿಕೊಂಡಿದ್ದಾರಂತೆ.

ಹೌದು, ದರ್ಶನ್ ಸೊಕ್ಕು, ಅಹಂಕರಾದ ಮಾತು ಕರಗಿಸಿರುವ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಶುರು ಮಾಡಿದ್ದಾರಂತೆ. ಆದರೆ ಪೊಲೀಸರ ಸಿಟ್ಟು ನೋಡಿ ದರ್ಶನ್ ಬೆಚ್ಚಿಬಿದ್ದು, ಈಗ ಪೊಲೀಸರ ಕಾಲು ಹಿಡಿಯಲು ಹೋದ ಘಟನೆ ವರದಿ ಆಗಿದೆ.

ಸಿಕ್ಕ ಸಾಕ್ಷಿಗಳ ಮುಂದಿಟ್ಟು ದರ್ಶನ್​ಗೆ ತನಿಖಾಧಿಕಾರಿಗಳ ಪ್ರಶ್ನೆ ಮಾಡುತ್ತಿದ್ರು. ಜಾಸ್ತಿ ಪ್ರಶ್ನೆ ಕೇಳ್ತಿದ್ದಂತೆ ದರ್ಶನ್ ಕಾಲಿಗೆ ಬಿದ್ದಿದ್ದಾರೆ. ನನ್ನದು ತಪ್ಪಾಗಿದೆ, ದಯವಿಟ್ಟು ಏನೂ ಕೇಳಬೇಡಿ. ಕೈ ಮುಗಿತೀನಿ ಬಿಟ್ಬಿಡಿ ಸರ್, ಗೊತ್ತಿಲ್ಲದೆ ಏನೋ ತಪ್ಪು ಆಗಿದೆ. ಗೊತ್ತಿರೋದನ್ನೆಲ್ಲಾ ಹೇಳಿದ್ದೀನಿ. ಮತ್ತೆ ಏನೇನೋ ಕೇಳಬೇಡಿ ಎಂದು ಮನವಿ ಮಾಡಿದ್ದಾರಂತೆ. ಆದರೆ ದರ್ಶನ್​​ ಮಾತಿಗೆ ಮಣಿಯದ ಪೊಲೀಸ್ರು ನಾನ್​ ಸ್ಟಾಪ್​​ ವಿಚಾರಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ದರ್ಶನ್ ಮಾತು ಕೇಳಿ ಪೋಲೀಸರು ಏನೋ ನೀನು ಇಷ್ಟು ದಿನ ಬರೀ ಸುಳ್ಳು ಹೇಳ್ತಾ ಇದ್ದೆ ಯಾಕೋ? ಅಂತಾ ಪ್ರಶ್ನೆ ಮಾಡಿದ್ದಾರಂತೆ, ಅಲ್ಲದೆ ಕೊಲೆ ಆರೋಪದಲ್ಲಿ ನಿನ್ನ ಪಾತ್ರದ ಬಗ್ಗೆ ಎಲ್ಲಾ ರೀತಿಯ ಸಾಕ್ಷ್ಯ ಇದೆ ಎಂದು ದರ್ಶನ್‌ಗೆ ತಿಳಿಸಿದ್ದಾರಂತೆ.

Actor Darshan: ನಟ ದರ್ಶನ್‌ ಜೊತೆ ಪತ್ನಿ ವಿಜಯಲಕ್ಷ್ಮೀಗೂ ಸಂಕಷ್ಟ; ಈ ಕೇಸಲ್ಲಿ ವಿಜಯಲಕ್ಷ್ಮೀ A1, ನಟ ದರ್ಶನ್‌ A3

You may also like

Leave a Comment