Physical relationship: ಲೈಂಗಿಕತೆಯೂ ಮನುಷ್ಯ ಜೀವನದ, ಸಾಂಸಾರಿಕ ಬದುಕಿನ ಪ್ರಮುಖ ಭಾಗ. ಇದು ಚೆನ್ನಾಗಿದ್ದರೆ ಎಲ್ಲದೂ ಚೆನ್ನಾಗಿರುತ್ತದೆ. ಅಂದಹಾಗೆ ಇದರ ಸಮಸ್ಯೆ ಹೆಚ್ಚಾಗಿ ಪುರುಷರಲ್ಲಿ ಕಂಡುಬರುತ್ತದೆ. ಆದರೆ ಇದರ ಪರಿಹಾರಕ್ಕೆ ಮಾರ್ಗಗಳು ಇವೆ.
KSRTC: ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ! ರಸ್ತೆಗೆ ಇಳಿಯಲಿದೆ ಸಾವಿರಗಳಷ್ಟು ಹೊಸ ಬಸ್!
ಪುರುಷರಲ್ಲಿ ಕೆಲವೊಂದು ಲೈಂಗಿಕ ಸಮಸ್ಯೆಗಳು ಕಂಡುಬಂದರೆ ಅದು ಸಂಬಂಧಕ್ಕೆ ಹಾನಿ ಉಂಟು ಮಾಡುವುದು ಪಕ್ಕಾ. ಮುಖ್ಯವಾಗಿ ಪುರುಷರಲ್ಲಿ ಕಾಮಾಸಕ್ತಿ ಹೆಚ್ಚು ಮಾಡಲು ಟೆಸ್ಟೋಸ್ಟೆರಾನ್ ಎನ್ನುವ ಹಾರ್ಮೋನ್ ಹೆಚ್ಚಾಗಿರಬೇಕು. ಇದು ಕುಂದಿದ್ದರೆ ಅದರಿಂದ ಕಾಮಾಸಕ್ತಿಯು ಕಡಿಮೆ ಆಗುವುದು. ಇದರೊಂದಿಗೆ ನಿಶ್ಯಕ್ತಿ, ಒತ್ತಡ, ಖಿನ್ನತೆ ಕೂಡ ಬರುವುದು. ಕಾಮಾಸಕ್ತಿ ಹೆಚ್ಚಿಸಲು ಹಲವಾರು ವಿಧಾನಗಳು ಇವೆ. ಅದೆಲ್ಲದರ ಬದಲು ನೀವು ಇದೊಂದು ಹಣ್ಣು ತಿಂದರೆ ಸಾಕು. ನಿಮ್ಮ ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗುತ್ತದೆ. ಅದುವೇ ಸ್ಟ್ರಾಬೆರಿ ಹಣ್ಣು.
ಹೌದು, ಸ್ಟ್ರಾಬೆರಿ ಹಣ್ಣುಗಳಲ್ಲಿ ಸತುವಿನ ಪ್ರಮಾಣವು ಅತ್ಯಧಿಕವಾಗಿದೆ ಮತ್ತು ಈ ಪೋಷಕಾಂಶವು ಲೈಂಗಿಕ ಶಕ್ತಿ ನೀಡುವಲ್ಲಿ ನೆರವಾಗುವುದು. ಇದು ಟೆಸ್ಟೋಸ್ಟೆರಾನ್ ಮಟ್ಟ ವೃದ್ಧಿಸುವುದು ಮತ್ತು ವೀರ್ಯದ ಉತ್ಪತ್ತಿ ಹೆಚ್ಚಿಸುವುದು.
ಸ್ಟ್ರಾಬೆರಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಕಾಮಾಸಕ್ತಿ ವೃದ್ಧಿಸುವುದು. ವಿಟಮಿನ್ ಸಿ ಪುರುಷರಲ್ಲಿನ ಪ್ರಾಸ್ಟ್ರೇಟ್ ಕ್ಯಾನ್ಸರ್ ನ್ನು ತಡೆಯುವುದು ಎಂದು ಅಧ್ಯಯನಗಳು ಹೇಳಿವೆ.
ಜೊತೆಗೆ ಇದು ಪುರುಷರು ಮತ್ತು ಮಹಿಳೆಯರಿಗೆ ಉತ್ತಮ ಕಾಮವನ್ನು ಹೊಂದಲು ಸಹಾಯ ಮಾಡುತ್ತದೆ. ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಸ್ಟ್ರಾಬೆರಿಯಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.
