Home » Rahul Gandhi: ವಯನಾಡು ಸಂಸದ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ !!

Rahul Gandhi: ವಯನಾಡು ಸಂಸದ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ !!

0 comments
Rahul Gandhi

Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದು ಪಕ್ಕಾ ಆಗಿದೆ.

Belthangady: ಅಸಾಮಾನ್ಯ ಶ್ರಮಜೀವಿಯ ಸಾವಿಗೆ ಮರುಗಿದ ಬೆಳ್ತಂಗಡಿ ; ತೆಂಗಿನ ಕಾಯಿ ಕೀಳುವಾಗ ಏಣಿ ಜಾರಿ ಬಿದ್ದಿದ್ದ ವಿಶ್ವನಾಥ್ ಗೌಡ ಇನ್ನಿಲ್ಲ !

ಲೋಕಸಭಾ ಚುನಾವಣೆಯಲ್ಲಿ ರಾಯ್ಬರೇಲಿ(Raybareli) ಹಾಗೂ ಕೇರಳದ ವಯನಾಡು(Vayanadu) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದರು. ಆದರೆ, ಮುಂದೆ ಒಂದು ಕ್ಷೇತ್ರದಲ್ಲಿ ಮಾತ್ರ ಅವರು ಸಂಸದರಾಗಿ ಮುಂದುವರಿಯಲು ಅವಕಾಶವಿರುತ್ತದೆ. ಹೀಗಾಗಿ ಅವರು ಒಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಹೀಗಾಗಿ ವಯನಾಡು ಕ್ಷೇತ್ರಕ್ಕೆ ರಾಜಿನಾಮೆ ನೀಡಿ, ರಾಯ್ಬರೇಲಿ ಕ್ಷೇತ್ರದ ಸಂಸದರಾಗಿ ಮುಂದುವರೆಯಲಿದ್ದಾರೆ.

ಕುಟುಂಬದ ಭದ್ರಕೋಟೆ ಅಮೇಠಿಯಲ್ಲಿ(Amethi) 2019ರ ಚುನಾವಣೆಯಲ್ಲಿ ಸೋತಾಗ ಕೈಹಿಡಿದು ಸಂಸತ್‌ಗೆ ಕಳುಹಿಸಿದ ಕೇರಳದ ವಯನಾಡು ಜನರ ವಿಶ್ವಾಸ ಕಾಪಾಡಿಕೊಳ್ಳುವುದೇ ಅಥವಾ ತಮ್ಮ ಕುಟುಂಬಸ್ಥರ ತವರು ಕ್ಷೇತ್ರವಾದ ರಾಯ್‌ಬರೇಲಿಯನ್ನು ಉಳಿಸಿಕೊಳ್ಳುವುದೇ ಎಂಬ ಇಕ್ಕಟ್ಟಿನಲ್ಲಿ ರಾಹುಲ್‌ ಗಾಂಧಿ ಇದ್ದರು. ಆದರೀಗ ಕಾಂಗ್ರೆಸ್‌ ಮೂಲಗಳು ತಿಳಿಸಿದ ಪ್ರಕಾರ ಅವರು ವಯನಾಡನ್ನು ಬಿಟ್ಟುಕೊಡಲಿದ್ದಾರೆ.

ಪ್ರಿಯಾಂಕ ಸ್ಪರ್ಧೆ:
ತಮ್ಮನಿಂದ ತೆರವಾಗುವ ವಯನಾಡು ಕ್ಷೇತ್ರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ(Priyanka Gandhi) ಸ್ಪರ್ಧಿಸುವುದು ಫಿಕ್ಸ್ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸಿರುವ ಪ್ರಿಯಾಂಕಾ ಗಾಂಧಿ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿಲ್ಲ. ವಯನಾಡಿನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಲಿ ಅನ್ನೋದು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಸೆಯಾಗಿತ್ತು.

Govinda Karajola’s statement: ಕಾಂಗ್ರೆಸ್ ನ 40 ಶಾಸಕರಿಂದ ರಾಜಿನಾಮೆ?! ರಾಜ್ಯದ ಬೊಕ್ಕಸದಲ್ಲಿ ದುಡ್ಡಿಲ್ಲದ್ದೇ ಕಾರಣ ?!

You may also like

Leave a Comment