Home » Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ತನಿಖೆಯಲ್ಲಿ ಬಯಲಾಯ್ತು ರೌಡಿಗಳ ಸಂಪರ್ಕದ ಲಿಂಕ್‌

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ತನಿಖೆಯಲ್ಲಿ ಬಯಲಾಯ್ತು ರೌಡಿಗಳ ಸಂಪರ್ಕದ ಲಿಂಕ್‌

0 comments
Darshan property

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಹಲವು ವಿಷಯಗಳು ಹೊರಬೀಳುತ್ತಿದೆ. ಈಗಾಗಲೇ ಈ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಆಂಡ್‌ ಗ್ಯಾಂಗ್‌ ಅವರುಗಳ ಮೊಬೈಲ್‌ ಕರೆಗಳ ವಿವರ, ವಾಟ್ಸಾಪ್‌ ಅನ್ನು ತಾಂತ್ರಿಕ ತಜ್ಞರು ಪರಿಶೀಲನೆ ಮಾಡಿದ್ದಾರೆ. ಇವರಲ್ಲಿ ಕೆಲವರಿಗೆ ರೌಡಿಗಳ ಸಂಪರ್ಕ ಇರುವುದು ತಿಳಿದು ಬಂದಿದೆ.

Puttur: ಕಾಂತಮಂಗಲದಲ್ಲಿ ವ್ಯಕ್ತಿಯ ಕೊಲೆ : ಆರೋಪಿ ಎಡಮಂಗಲ ನಿವಾಸಿಯ ಬಂಧನ

ಇವರು ಯಾವ ಉದ್ದೇಶಕ್ಕೆ ರೌಡಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬುವುದರ ಕುರಿತು ಪರಿಶೀಲನೆ ಮಾಡಲಿದ್ದಾರೆ.

ನಟ ದರ್ಶನ್‌ ಮ್ಯಾನೇಜರ್‌ ನಾಗರಾಜ್‌, ಕಾರು ಚಾಲಕ ಲಕ್ಷ್ಮಣ್‌ ಅವರ ಮೊಬೈಲ್‌ ಪರಿಶೀಲನೆ ಮಾಡಲಾಗಿದ್ದು, ಇವರುಗಳಿಗೆ ರೌಡಿಗಳೊಂದಿಗೆ ಚರ್ಚಿಸಿರುವ ಮಾಹಿತಿ ಹೊರಬಿದ್ದಿದೆ. ದರ್ಶನ್‌ ಅವರು ಬೇರೆ ಬೇರೆ ಜಿಲ್ಲೆಗಳಿಗೆ ಪ್ರಚಾರಕ್ಕೆಂದು ಹೋದಾಗ ಆಯಾ ಭಾಗದಲ್ಲಿ ಅಭಿಮಾನಿಗಳನ್ನು ಸೇರಿಸಲು ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದವರ ಜೊತೆ ಮಾತುಕತೆ ನಡೆಸಿರುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.

Uppinangady: ಮಲಗಿದ್ದ ಮಹಿಳೆ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್‌; ಹತ್ತನೇ ತರಗತಿ ಬಾಲಕನ ಬಂಧನ

 

You may also like

Leave a Comment