Home » Delhi Bride Dies: ತನ್ನ ಮದುವೆಯಲ್ಲಿ ಡ್ಯಾನ್ಸ್‌ ಮಾಡುತ್ತಿರುವಾಗಲೇ ಸಾವು ಕಂಡ ವಧು

Delhi Bride Dies: ತನ್ನ ಮದುವೆಯಲ್ಲಿ ಡ್ಯಾನ್ಸ್‌ ಮಾಡುತ್ತಿರುವಾಗಲೇ ಸಾವು ಕಂಡ ವಧು

0 comments
Delhi Bride Dies

Delhi Bride Dies: ಮದುವೆ ಸಮಾರಂಭದಲ್ಲಿದ್ದ ಮಧುಮಗಳೋರ್ವಳು ತನ್ನ ಮೆಹಂದಿ ಕಾರ್ಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಸಾವು ಕಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ; ಸ್ವಇಚ್ಛಾ ಹೇಳಿಕೆ ದಾಖಲು ಮಾಡಿದ ನಟ ದರ್ಶನ್‌

ಉತ್ತರಾಖಂಡದ ನೈನಿತಾಲ್‌ನಲ್ಲಿರುವ ನೌಕುಚಿಯಾಟಲ್‌ನಲ್ಲಿರುವ ರೆಸಾರ್ಟ್‌ನಲ್ಲಿ ಶನಿವಾರ ರಾತ್ರಿ ಹೃದಯ ವಿದ್ರಾವಕ ಘಟನೆ ನಡೆದಿದೆ. ವಿವಾಹ ಸಮಾರಂಭದಲ್ಲಿ ದೆಹಲಿ ನಿವಾಸಿ ವಧು ನೃತ್ಯ ಮಾಡುವಾಗ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಕುಟುಂಬವು ತಡರಾತ್ರಿ ಮೃತದೇಹದೊಂದಿಗೆ ದೆಹಲಿಗೆ ಮರಳಿರುವ ಕುರಿತು ವರದಿಯಾಗಿದೆ.

ಡಾ. ಸಂಜಯ್ ಕುಮಾರ್ ಜೈನ್ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಕೆಲವು ವಿಶೇಷ ಪರಿಚಯಸ್ಥರೊಂದಿಗೆ ವಿವಾಹಕ್ಕಾಗಿ ನೌಕುಚಿಯಾಟಲ್‌ನಲ್ಲಿರುವ ರೆಸಾರ್ಟ್‌ಗೆ ಬಂದಿದ್ದಾರೆ ಎಂದು ಭೀಮತಾಲ್ ಪೊಲೀಸ್ ಠಾಣೆ ಪ್ರಭಾರಿ ಜಗದೀಪ್ ನೇಗಿ ತಿಳಿಸಿದ್ದಾರೆ. ಅವರ ಪುತ್ರಿ ಶ್ರೇಯಾ ಜೈನ್ (28) ಎಂಬುವವರೇ ಮೃತಪಟ್ಟವರು.

ಶನಿವಾರ ಸಂಜೆ ಮೆಹಂದಿ ಸಮಾರಂಭದ ವೇಳೆ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಶ್ರೇಯಾ ಹಠಾತ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.

ಹೃದಯಾಘಾತದಿಂದ ವಧು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ ವೈದ್ಯರು. ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದರು. ನಂತರ ಮೃತದೇಹದೊಂದಿಗೆ ಕುಟುಂಬಸ್ಥರು ತಡರಾತ್ರಿ ದೆಹಲಿಗೆ ತೆರಳಿದ್ದರು.

Ayodhya Ram Mandir: ಅಯೋಧ್ಯೆಯ ರಾಮಮಂದಿರದಲ್ಲಿ ಗುಂಡಿನ ದಾಳಿ; ಗುಂಡಿಗೆ ಬಲಿಯಾದ SSF ಜವಾನ

You may also like

Leave a Comment