Ayodhya Ram Mandir: ಅಯೋಧ್ಯೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್ ಯೋಧ ಗುಂಡಿಗೆ ಬಲಿಯಾಗಿದ್ದಾರೆ. ಘಟನೆ ವೇಳೆ ಯೋಧನನ್ನು ಕೋಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿರುವ ವಿಐಪಿ ಗೇಟ್ ಬಳಿ ನಿಯೋಜಿಸಲಾಗಿತ್ತು. ರಾಮಮಂದಿರದ ಮುಖ್ಯ ಭಾಗವು ಇಲ್ಲಿಂದ ಕೇವಲ 150 ಮೀಟರ್ ದೂರದಲ್ಲಿದೆ. ಯೋಧನನ್ನು ಶತ್ರುಘ್ನ ವಿಶ್ವಕರ್ಮ (25) ಎಂದು ಗುರುತಿಸಲಾಗಿದೆ.
Viral Video: ಸಿಗರೇಟ್ ಸೇದುತ್ತಾ ಮಗುವಿನ ಜೊತೆ ರೀಲ್ಸ್ ಮಾಡಿದ ಮಹಾತಾಯಿ; ವಿಡಿಯೋ ವೈರಲ್
ಮಾಹಿತಿ ಪ್ರಕಾರ, ಬುಧವಾರ ಬೆಳಗ್ಗೆ 5.25ಕ್ಕೆ ಈ ಘಟನೆ ನಡೆದಿದೆ. ಆಗ ಕೋಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿರುವ ವಿಐಪಿ ಗೇಟ್ ಬಳಿ ಯೋಧ ಶತ್ರುಘ್ನ ವಿಶ್ವಕರ್ಮ ಅವರನ್ನು ನಿಯೋಜಿಸಲಾಗಿತ್ತು. ರಾಮಮಂದಿರದ ಮುಖ್ಯ ಭಾಗವು ಇಲ್ಲಿಂದ ಕೇವಲ 150 ಮೀಟರ್ ದೂರದಲ್ಲಿದೆ. ಘಟನೆಯ ವೇಳೆ ಶತ್ರುಘ್ನ ವಿಶ್ವಕರ್ಮ ಬಳಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿತ್ತು. ಗುಂಡು ಜವಾನನ ಹಣೆಗೆ ಮುಂಭಾಗದಿಂದ ತಗುಲಿತ್ತು. ಕೂಡಲೇ ಅಲ್ಲಿದ್ದ ಸಹ ಭದ್ರತಾ ಸಿಬ್ಬಂದಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಯಲ್ಲಿ ಅಲ್ಲಿ ವೈದ್ಯರು ಯೋಧ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಘಟನೆ ನಡೆದ ನಂತರ ಐಜಿ ಮತ್ತು ಎಸ್‌ಎಸ್‌ಪಿ ಸ್ಥಳಕ್ಕೆ ಆಗಮಿಸಿದ್ದಾರೆ. ಘಟನಾ ಸ್ಥಳವನ್ನು ತನಿಖೆ ನಡೆಸಲಾಗುತ್ತಿದೆ, ವಿಧಿವಿಜ್ಞಾನ ತಂಡವನ್ನು ಸಹ ಕರೆಸಲಾಗಿದ್ದು, ಬುಲೆಟ್ ಮುಂಭಾಗದಿಂದ ತಲೆಗೆ ಹೇಗೆ ತಗುಲಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೂ ಮುನ್ನ ಶತ್ರುಘ್ನ ಮೊಬೈಲ್ ನೋಡುತ್ತಿದ್ದ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ದೇವಸ್ಥಾನದ ಭದ್ರತೆಗಾಗಿ ಎಸ್ ಎಸ್ ಎಫ್ ಪಡೆ ರಚಿಸಲಾಗಿದೆ.
ರಾಮಮಂದಿರ ಉದ್ಘಾಟನೆಯ ನಂತರ ನಡೆದ ಎರಡನೇ ಘಟನೆ ಇದಾಗಿದೆ. ಮೂರು ತಿಂಗಳ ಹಿಂದೆ ಮಾರ್ಚ್‌ನಲ್ಲಿಯೂ ರಾಮಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧನ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ವೇಳೆ ಯೋಧನೇ ತನ್ನ ರೈಫಲ್ ನಿಂದ ತಪ್ಪಾಗಿ ಗುಂಡು ಹಾರಿಸಿದ್ದಾನೆ. ಅವರು ಗನ್ ಕ್ಲೀನ್ ಮಾಡುತ್ತಿದ್ದಾಗ ಟ್ರಿಗರ್ ಒತ್ತಿದ್ದು, ಗುಂಡು ಯೋಧನಿಗೆ ತಗುಲಿದೆ ಎಂದು ವರದಿಯಾಗಿತ್ತು.
Rose Moon: ಜೂ. 21ಕ್ಕೆ ರೋಸ್ ಮೂನ್ ಗೋಚರ: ಹನಿಮೂನ್ ಫೀಲ್ ಕೊಡೋ ಈ ಸ್ಪೆಷಲ್ ಮೂನ್ ನೋಡೋಕೆ ಮಿಸ್ ಮಾಡದಿರಿ
