Home » Vidyadhan Scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: 75 ಸಾವಿರ ವಿದ್ಯಾರ್ಥಿ ವೇತನ! ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ

Vidyadhan Scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: 75 ಸಾವಿರ ವಿದ್ಯಾರ್ಥಿ ವೇತನ! ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ

0 comments
Vidyadhan Scholarship

Vidyadhan Scholarship: 2024-25: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸರೋಜಿನಿ ದಾಮೋದರನ್ ಫೌಂಡೇಶನ್ (ಎಸ್‌ಡಿಎಫ್‌) ಹಾಗೂ ಶಿಬುಲಾಲ್‌ ಫ್ಯಾಮಿಲಿ ಫಿಲಾಂತ್ರೋಪಿಕ್ ಇನಿಶಿಯೇಟಿವ್‌ (ಎಸ್‌ಎಫ್‌ಪಿಐ) ಕಡೆಯಿಂದ 2024-25 ಸಾಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

Relationship: “ಒಳಉಡುಪಿನಿಂದ ಗಂಡನನ್ನು ಸುಲಭವಾಗಿ ವಶೀಕರಣ ಮಾಡಬಹುದು”: ಎಕ್ಸ್ ಪರ್ಟ್ ಮಹಿಳೆ ಒಬ್ಬರ ವಶೀಕರಣದ ಟಿಪ್ಸ್!

ಹೌದು, ‘ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ’ (Vidyadhan Scholarship)  ಯೋಜನೆಯಡಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದು ಹನ್ನೊಂದನೇ ತರಗತಿ ಹಾಗೂ ಪದವಿ ಓದುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲ್ಪಡುವ ವಿದ್ಯಾರ್ಥಿ ವೇತನವಾಗಿದ್ದು, ಸದರಿ ವಿದ್ಯಾರ್ಥಿವೇತನ ಯೋಜನೆಯಡಿ 10,000 ರೂ ನಿಂದ 75,000 ರೂಪಾಯಿ ವರೆಗೂ ಆರ್ಥಿಕ ನೆರವು ಸಿಗಲಿದೆ.

ಈ ವಿದ್ಯಾಧನ ವಿದ್ಯಾರ್ಥಿವೇತನ ಪಡೆಯಲು ಉತ್ತರ ಪ್ರದೇಶದ, ಕೇರಳ, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಒಡಿಶಾ, ನವದೆಹಲಿ, ಲಢಾಕ್, ಬಿಹಾರ, ಜಾರ್ಖಂಡ್, ಪಂಜಾಬ್, ಹಿಮಾಚಲ ಪ್ರದೇಶ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿಯುಸಿ ಅಧ್ಯಯನದ ಅವಧಿಯಲ್ಲಿ ವರ್ಷಕ್ಕೆ 10,000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ. ಆ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆದಲ್ಲಿ , ಪದವಿ ಕೋರ್ಸ್ ಮುಂದುವರಿಸಲು ಕೂಡ ಅವರಿಗೆ ವಿದ್ಯಾರ್ಥಿವೇತನ ನೀಡಲಾಗುತದೆ.

ಪದವಿ ಕೋರ್ಸ್ ವಿದ್ಯಾರ್ಥಿವೇತನದ ಮೊತ್ತವು ರಾಜ್ಯ ಕೋರ್ಸ್ ಹಾಗೂ ಅವಧಿ ಇತ್ಯಾದಿಗಳನ್ನು ಅವಲಂಬಿಸಿ ವರ್ಷಕ್ಕೆ 10,000 ರೂಪಾಯಿಯಿಂದ 75,000 ರೂಪಾಯಿ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಮುಖ್ಯವಾಗಿ 2024ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಅಥವಾ ಎಲ್ಲಾ ವಿಷಯಗಳಲ್ಲಿ ಎ+ ಗ್ರೇಡ್ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ವೇತನ ಆಯ್ಕೆ ಮಾಡಲಾಗುತ್ತದೆ.

ಜೊತೆಗೆ ವಿಶೇಷಚೇತನ ವಿದ್ಯಾರ್ಥಿಗಳು ಶೇ.75ರಷ್ಟು ಅಂಕ ಪಡೆದರೂ ಅಂಥವರಿಗೆ ಅವಕಾಶ ನೀಡಲಾಗುತ್ತದೆ.

ಅರ್ಹ ವಿದ್ಯಾರ್ಥಿಗಳು ನೇರವಾಗಿ ವಿದ್ಯಾಧನ್ ವೆಬ್‌ಸೈಟ್‌ https://www.vidyadhan.org/ ಅಥವಾ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಎಸ್‌ಡಿಎಫ್‌ ವಿದ್ಯಾ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಜೂನ್ 30, 2024 ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದ್ದು; ಹೆಚ್ಚಿನ ಮಾಹಿತಿಗೆ ವಿದ್ಯಾಧನ್ ದೂರವಾಣಿ ಸಂಖ್ಯೆ 9663517131 ಸಂಪರ್ಕಿಸಬಹುದು.

ಪತಿ ನೋಡಲು ಠಾಣೆಗೆ ಮೊದಲ ಬಾರಿಗೆ ಬಂದ ಪತ್ನಿ ವಿಜಯಲಕ್ಷ್ಮೀ

You may also like

Leave a Comment