Home » AI Revolution: ಊಹೆಗೂ ನಿಲುಕದ ಹೊಸ ಪರಿಚಯ! ಇನ್ಮೇಲೆ ರೋಮ್ಯಾನ್ಸ್ ಮಾಡೋಕೆ, ಫೀಲಿಂಗ್ ಶೇರ್ ಮಾಡೋಕೆ, ದೈಹಿಕ ಸುಖ ಕೊಡೋಕೆ ಇಲ್ಲಿದೆ ರತಿ ಗೊಂಬೆ!

AI Revolution: ಊಹೆಗೂ ನಿಲುಕದ ಹೊಸ ಪರಿಚಯ! ಇನ್ಮೇಲೆ ರೋಮ್ಯಾನ್ಸ್ ಮಾಡೋಕೆ, ಫೀಲಿಂಗ್ ಶೇರ್ ಮಾಡೋಕೆ, ದೈಹಿಕ ಸುಖ ಕೊಡೋಕೆ ಇಲ್ಲಿದೆ ರತಿ ಗೊಂಬೆ!

0 comments
AI Revolution

AI Revolution: ಪ್ರತಿಯೊಂದು ಕ್ಷೇತ್ರದಲ್ಲೂ ಮನುಷ್ಯರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅಂತೆಯೇ ಇದೀಗ ಊಹೆಗೂ ನಿಲುಕದ ಹೊಸ ಪರಿಚಯ ಇಲ್ಲಿದೆ ನೋಡಿ. ಹೌದು, ಇನ್ಮೇಲೆ ರೋಮ್ಯಾನ್ಸ್ ಮಾಡೋಕೆ, ಫೀಲಿಂಗ್ ಶೇರ್ ಮಾಡೋಕೆ, ದೈಹಿಕ ಸುಖ ಕೊಡೋಕೆ ಒಟ್ಟಿನಲ್ಲಿ ನಿಮ್ಮನ್ನು ಹೆಂಡತಿಗಿಂತ ಹೆಚ್ಚು ಪ್ರೀತಿ ಮಾಡುವ ಗೊಂಬೆ ನಿಮಗಾಗಿ ಬರಲಿದೆ. ಅಷ್ಟೇ ಅಲ್ಲ ಈ ಗೊಂಬೆ ಜೊತೆ ಯಾವುದೇ ಜಗಳ ಆಗೋಕೆ ಸಾಧ್ಯವಿಲ್ಲ.

ಹೌದು, ಅಪ್ಪಟ ​ ಮನುಷ್ಯರಂತೆ ಪ್ರೀತಿ ಮಾಡುವ, ಹಾಸಿಗೆಯಲ್ಲಿ ಸಾಥ್​ ನೀಡುವ ಗೊಂಬೆಗಳು ಬಂದಿವೆ. ಗೊಂಬೆ ಅಂದರೆ ಬರೀ ಗೊಂಬೆ ಅಲ್ಲ. ಇವು AI  (AI Revolution) ಚಾಲಿತ ಲೈಂಗಿಕ ಗೊಂಬೆಗಳು. ಈ ಗೊಂಬೆಗಳು ನಿಮ್ಮ ಜೊತೆಗೆ ಯಾವುದಕ್ಕೂ ಆಗಲ್ಲ ಅನ್ನಲ್ಲ.

ಎಲ್ಲಾ ಕ್ಷೇತ್ರಗಳಲ್ಲೂ AI ಸಂಚಲನ ಮೂಡಿಸಿರುವಂತೆ, ಇದೀಗ ಲೈಂಗಿಕ ಆಟಿಕೆಗಳ ಉದ್ಯಮದಲ್ಲೂ ಬಿರುಗಾಳಿಯನ್ನು ಎಬ್ಬಿಸಿದೆ. ಲೈಂಗಿಕ ಆಟಿಕೆಗಳಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಅಳವಡಿಸಿದ್ದು, ಮನುಷ್ಯ ಸಹಜ ಪ್ರತಿಕ್ರಿಯೆಯನ್ನು ಯಶಸ್ಸು ಗೊಳಿಸಲಾಗಿದೆ. ಎಐ ಚಾಲಿತ ಲೈಂಗಿಕ ಗೊಂಬೆಗಳು ಸರಸ ಮಾತ್ರವಲ್ಲ ಮನುಷ್ಯರಂತೆ ಮಾತಿಗೂ ಇಳಿಯಲಿವೆ. ಚಾರ್ಟ್​ಜಿಪಿಟಿ ಸಹಾಯದಿಂದ ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಲಿದೆ, ಬಳಕೆದಾರರ ಭಾವನೆಗಳಿಗೆ ಸ್ಪಂದಿಸಲಿದೆ. ಥೇಟ್​​ ಮನುಷ್ಯರಂತೆ ಹಾಸಿಗೆಯಲ್ಲಿ ಇರಲಿವೆ ಎಂದು ಲೈಂಗಿಕ ಆಟಿಕೆಗಳ ಕಂಪನಿಗಳು ಹೇಳಿಕೊಂಡಿವೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಚೀನೀ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಲೈಂಗಿಕ ರೋಬೋಟ್‌ಗಳಿಗೆ ChatGPT-ರೀತಿಯ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ತಾಂತ್ರಿಕಕತೆಯ ಮೂಲಕ ಮಾತಾಡುವ, AI-ಚಾಲಿತ ಗೊಂಬೆಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ. ಲೈಂಗಿಕ ಗೊಂಬೆಗಳು ಪುರುಷ ಅಥವಾ ಸ್ತ್ರೀ ರೂಪಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿವೆ. ಈ ವರ್ಷದ ಆಗಸ್ಟ್‌ನಲ್ಲಿ ಮಾಡೆಲ್​ಗಳನ್ನು ನಿರೀಕ್ಷಿಸಲಾಗಿದೆ ಎಂದು ಸಿಇಒ ಇವಾನ್ ಲೀ ತಿಳಿಸಿದ್ದಾರೆ.

 

You may also like

Leave a Comment