Home » Air India: ಏರ್‌ಇಂಡಿಯಾ ಅಪಘಾತದಲ್ಲಿ ಬದುಕುಳಿದ ವ್ಯಕ್ತಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India: ಏರ್‌ಇಂಡಿಯಾ ಅಪಘಾತದಲ್ಲಿ ಬದುಕುಳಿದ ವ್ಯಕ್ತಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

by Mallika
0 comments

Air India: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಬದುಕಿದ್ದ ಓರ್ವ ವ್ಯಕ್ತಿ ಇದೀಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸಹೋದರ ಅಂತ್ಯಸಂಸ್ಕಾರ ನೆರವೇರಿಸಬೇಕಿರುವ ಹಿನ್ನೆಲೆಯಲ್ಲಿ ಆತನನ್ನು ಡಿಸ್ಚಾರ್ಜ್‌ ಮಾಡಲಾಗಿದೆ.

ವಿಮಾನದಲ್ಲಿ ರಮೇಶ್‌ ತುರ್ತು ನಿರ್ಗಮನ ದ್ವಾರದ ಪಕ್ಕದಲ್ಲಿ 11A ನಲ್ಲಿ ಕುಳಿತಿದ್ದರು. ಅಪಘಾತ ನಡೆದಾಗ ಇವರು ಕುಳಿತಿದ್ದ ಸೀಟು ಬೇರ್ಪಟ್ಟು ದೂರ ಹಾರಿದೆ. ಹಾಗಗಿ ಬೆಂಕಿಯಿಂದ ಪಾರಾಗಿದ್ದಾರೆ. ಸೀಟಿನ ಸಮೇತ ಕೆಳಗೆ ಹಾರಿದ್ದು, ವಿಮಾನ ತುಂಡಾದಾಗ ಸೀಟು ಕಳಚಿ ಬಂದಿತ್ತು ಎಂದು ರಮೇಶ್‌ ವೈದ್ಯರಿಗೆ ತಿಳಿಸಿದ್ದರು.

ತಾನು ಇಳಿದ ಸ್ಥಳ ತಗ್ಗಾಗಿತ್ತು. ಸೀಟ್‌ ಬೆಲ್ಟ್‌ ತೆಗೆದೆ ಒಂದು ಕ್ಷಣ ಮೈಯೆಲ್ಲಾ ಕಂಪಿಸಿತ್ತು. ನಾನು ನೆಲಕ್ಕೆ ಹತ್ತಿರದಲ್ಲಿದ್ದೆ. ಹಾಗಾಗಿ ಹೊರ ಬಂದೆ ಎಂದು ಹೇಳಿದ್ದಾರೆ.

You may also like