Reservation: ವಸತಿ ನಿರ್ಮಾಣ ಯೋಜನೆಗಳಲ್ಲಿ ಮೀಸಲಾತಿ ಹೆಚ್ಚಳ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ , ಅರ್ಬನ್ ಕಡೆ ತುಂಬಾ ಜನ ಅಲ್ಪಸಂಖ್ಯಾತರು ಇದ್ದಾರೆ. ಅಲ್ಲಿ ಅನೇಕ ಕಡೆಗಳಲ್ಲಿ ಮನೆಗಳು ಖಾಲಿ ಇವೆ. ಎಷ್ಟೋ ಕಡೆ ಕಟ್ಟಿರೋ ಬಿಲ್ಡಿಂಗ್ ಖಾಲಿ ಇದೆ. ಮೈನಾರಿಟಿ ಪಾಪುಲೇಷನ್ ಜಾಸ್ತಿ ಆಗ್ತಾ ಇದೆ. ಅವರಿಗಾದ್ರೂ ಅವಕಾಶ ಕೊಡಬೇಕು, ಮನೆಗಳು ಅವರಿಗಾದ್ರೂ ಸಿಗಲಿ ಅಂತ ನಮ್ಮ ಉದ್ದೇಶ. ಹೀಗಾಗಿ 10 ಪರ್ಸೆಂಟ್ ನಿಂದ 15 ಪರ್ಸೆಂಟ್ ಏರಿಕೆ ಮಾಡಲಾಗ್ತಿದೆ. ನಾವು ಬಡವರಿಗೆ ಹೆಲ್ಪ್ ಮಾಡಲು ಮುಂದಾಗಿದ್ದೇವೆ. ಖಾಲಿ ಇರುವ ಬಿಲ್ಡಿಂಗ್ ಗಳು ಇವೆ ಏನು ಮಾಡಬೇಕು ಎಂದರು.
ಇದೇ ವೇಳೆ ಮಾತನಾಡಿದ ಸಚಿವ ಎಚ್.ಕೆ ಪಾಟೀಲ್ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.10 ರಷ್ಡು ಇದ್ದ ಮೀಸಲಾತಿಯನ್ನ ಶೇ. 15 ರಷ್ಟು ಏರಿಕೆ ಮಾಡಲಾಗಿದೆ. ಸಾಚಾರ್ ಕಮಿಟಿ ವರದಿಯನ್ನೂ ಕೂಡ ಈಗ ಕೇಂದ್ರ ಪರಿಗಣಿಸುತ್ತಿದೆ. ಕೇಂದ್ರದ ಸೂಚನೆಗಳನ್ನು ಗಮನಿಸಿ ಸಾಮಾಜಿಕ ನ್ಯಾಯದ ಪಾಲನೆ ಮಾಡುತ್ತಿದ್ದೇವೆ. ನಿಯಮಗಳಿಗೆ ಕ್ಯಾಬಿನೆಟ್ ಅನುಮೋದನೆ ಸಾಕು ಎಂದರು.
ಇದು ಎಲ್ಲಾ ಅಲ್ಪಸಂಖ್ಯಾತರಿಗೂ ಅನ್ವಯವಾಗಲಿದ್ದು, ಮುಸ್ಲಿಂ, ಜೈನರು, ಕ್ರಿಶ್ಚಿಯನ್ ಎಲ್ಲರೂ ಕೂಡ ಇದರಲ್ಲಿ ಒಳಗೊಳ್ಳುತ್ತಾರೆ. ಇದಕ್ಕೆ ಬೇಕಾದ ಹಲವು ಅಧ್ಯಯನ ವರದಿಗಳೂ ಕೂಡ ಇವೆ. ಬಡವರಿಗೆ ಮನೆ ಮಾಡಿಕೊಡುವುದರಲ್ಲಿ ರಾಜಕೀಯ ವಾಸನೆ ಹುಡುಕುವವರಿಗೆ ನಾವು ಉತ್ತರ ಕೊಡಲ್ಲ. ವಸತಿ ಹೀನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ‘ಹೈದರಾಬಾದ್‌ನಲ್ಲಿ ಕಾಶಿ…’ – ಮಹೇಶ್ ಬಾಬು ಸಿನಿಮಾಕ್ಕೆ ₹50 ಕೋಟಿ ವೆಚ್ಚದಲ್ಲಿ ‘ಬನಾರಸ್’ ನಿರ್ಮಾಣ
