Air India: ಅಹಮದಾಬಾದ್ ಬಳಿ ಏರ್‌ಇಂಡಿಯಾ ವಿಮಾನ ಪತನಗೊಂಡ ನಂತರ ವಿಮಾನ ತಪಾಸಣೆ ಬಿಗು ಹೆಚ್ಚಿದೆ. ಏರ್‌ಇಂಡಿಯಾ 787 ಡ್ರೀಮ್ ಲೈನರ್‌ಗಳಿಗೆ ಸುರಕ್ಷತೆ ಕಡ್ಡಾಯ ಮಾಡಲಾಗಿದ್ದು, ಜೂನ್ 20 ರಂದು ಒಂದೇ ದಿನ 9 ಏರ್‌ಇಂಡಿಯಾ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ.
ಜೂನ್ 20 ರ ಬೆಳಗ್ಗೆ ದೆಹಲಿಯಿಂದ ಹೊರಟು ಮಹಾರಾಷ್ಟ್ರಕ್ಕೆ ಬರುತ್ತಿದ್ದ 100 ಪ್ರಯಾಣಿಕರು ಇರುವ ಏರ್‌ಇಂಡಿಯಾ AI-2469 ವಿಮಾನಕ್ಕೆ ಆಕಾಶದಲ್ಲಿ ಪಕ್ಷ ಡಿಕ್ಕಿ ಹೊಡೆದಿದ್ದು, ಪರಿಣಾಮ ಸಣ್ಣ ಮಟ್ಟದಲ್ಲಿ ಹಾನಿಯಾಗಿದೆ. ಆದರೆ ಪ್ರಯಾಣಿಕರು ಸುರಕ್ಷಿತರಾಗಿದ್ದು, ವಿಮಾನ ಕೂಡಾ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ನಂತರ ಇಂಜಿನಿಯರಿಂಗ್ ತಂಡ ವಿಮಾನವನ್ನು ತಪಾಸಣೆ ಮಾಡುತ್ತಿದೆ. ದೆಹಲಿ ಪ್ರಯಾಣವನ್ನು ರದ್ದು ಮಾಡಲಾಗಿರುವ ಕುರಿತು ವರದಿಯಾಗಿದೆ.
8 ವಿಮಾನಗಳು ವರ್ಧಿತ ನಿರ್ವಹಣೆ, ಕಾರ್ಯಾಚರಣೆಯ ಕಾರಣಗಳಿಂದಾಗಿ ಸೇವೆಗಳನ್ನು ರದ್ದು ಮಾಡಲಾಗಿದೆ. ಈ ಎಂಟು ವಿಮಾನಗಳಲ್ಲಿ 4 ಅಂತರರಾಷ್ಟ್ರೀಯ ವಿಮಾನಗಳು, 4 ದೇಶಿಯ ವಿಮಾನಗಳು ಇದೆ. ಪುಣೆಯಿಂದ ದೆಹಲಿಗೆ ತೆರಳುವ AI874 ವಿಮಾನ, ಅಹಮದಾಬಾದ್ನಿಂದ ದೆಹಲಿ AI456 ವಿಮಾನ, ಹೈದರಾಬಾದ್ನಿಂದ ಮುಂಬೈ AI2872 ವಿಮಾನ ಮತ್ತು ಚೆನ್ನೈಯಿಂದ ಮುಂಬೈಗೆ ತೆರಳುವ AI571 ವಿಮಾನಗಳನ್ನು ರದ್ದು ಮಾಡಲಾಗಿದೆ.
