Safest airlines: ವಿಮಾನ ಪ್ರಯಾಣ ವಿಶ್ವದಾದ್ಯಂತ ವೇಗದ ಮತ್ತು ಪರಿಣಾಮಕಾರಿಯಾಗಿ ಸಂಪರ್ಕಿಸುವ ಪ್ರಮುಖ ಸಾರಿಗೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ದೈನಂದಿನ ಓಡಾಟ, ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕಾಗಿ, ವಿಮಾನ ಪ್ರಯಾಣವು ಬಹಳ ಕಮ್ಮಿ ಸಮಯದಲ್ಲಿ ಬಹು ದೀರ್ಘ ಮತ್ತು ದುರ್ಗಮ ದೂರವನ್ನು ಕ್ರಮಿಸಲು ಸಹಾಯ ಮಾಡುತ್ತದೆ.
ವಿಮಾನ ಪ್ರಯಾಣವು ತನ್ನ ವೇಗದ ಮತ್ತು ಆಹ್ಲಾದಕರ ಪ್ರಯಾಣದ ಅನುಭವಕ್ಕೆ ಹೆಸರಾದರೂ ಮತ್ತು ಅದರಲ್ಲಿ ಮೂಲ ಸೌಕರ್ಯ ಮತ್ತು ಐಷಾರಾಮಿ ಸೌಲಭ್ಯಗಳು ಮುಖ್ಯವಾದರೂ, ಅದಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ಇರೋದು ಸುರಕ್ಷತೆಯ ಅಗತ್ಯ. ತನ್ನ ಪ್ರಯಾಣಿಕರ ಜೀವಕ್ಕೆ ಸುರಕ್ಷತೆ ಒದಗಿಸುವುದು ಪ್ರತಿ ವಿಮಾನಯಾನ ಸಂಸ್ಥೆಯ ಜವಾಬ್ದಾರಿಯಾಗಿದೆ. ಆದರೆ, ಇತ್ತೀಚೆಗೆ ನಡೆದ ಅಹಮದಾಬಾದ್ ಬಳಿಯ ಏರ್ ಇಂಡಿಯಾ ವಿಮಾನ ಪತನಗೊಂಡ ಸುದ್ದಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ನೂರಾರು ಪ್ರಶ್ನೆಗಳನ್ನು ಎಬ್ಬಿಸಿದೆ. ದುರಂತಕ್ಕೆ ಕಾರಣವಾದ ಅಂಶಗಳ ಬಗ್ಗೆ ಹಲವಾರು ಥಿಯರಿಗಳು ಓಡಾಡುತ್ತಿವೆ. ಈ ದುರ್ಘಟನೆಯಲ್ಲಿ ಒಟ್ಟು 274 ಮಂದಿ ಸಾವಿಗೀಡಾದರು. ವಿಮಾನ ಪತನಗೊಂಡ ನಂತರ ನಡೆದ ಘಟನಾವಳಿಗಳು ಮತ್ತು ಅದರ ಭೀಕರತೆಯನ್ನು ನೆನೆಸಿಕೊಂಡು ನೋಡಿದರೆ, ವಿಮಾನ ಪ್ರಯಾಣ ಬೇಡವೇ ಬೇಡ ಎಂಬಷ್ಟು ಭಯವಾಗುತ್ತದೆ.
AirlineRatings.com ಸಂಸ್ಥೆಯು ಇದೀಗ ವಿಶ್ವದ ಅತ್ಯಂತ ಸುರಕ್ಷಿತ ಪೂರ್ಣ-ಸೇವಾ ವಿಮಾನಯಾನ ಸಂಸ್ಥೆಗಳ 2025ರ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಇಲ್ಲಿನ ವಿಮಾನಯಾನ ಸಂಸ್ಥೆಗಳನ್ನು ಪೂರ್ಣ-ಸೇವಾ ವಿಮಾನಯಾನ ಸಂಸ್ಥೆಗಳು ಮತ್ತು ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಗಳು ಎಂದು ಎರಡು ವರ್ಗಗಳಾಗಿ ಅಲ್ಲಿ ವರ್ಗೀಕರಿಸಲಾಗಿದೆ. ಕೆಲವು ವಿಮಾನದ ವಯಸ್ಸು, ವಿಮಾನದ ಗಾತ್ರ, ರೇಟ್ ಆಫ್ ಇನ್ಸಿಡೆಂಟ್ಸ್, ಪೈಲಟ್ ಕೌಶಲ್ಯ ಮತ್ತು ತರಬೇತಿ ಇತ್ಯಾದಿ ಅಂಶಗಳನ್ನೂ ಗಮನಕ್ಕೆ ತೆಗೆದುಕೊಂಡು ಈ ಪಟ್ಟಿಯನ್ನು ತಯಾರಿಸಲಾಗಿದೆ. ಈ ಶ್ರೇಯಾಂಕವು ಒಟ್ಟು 385 ವಿಮಾನಯಾನ ಸಂಸ್ಥೆಗಳ ವ್ಯಾಪಕ ಮೌಲ್ಯಮಾಪನವನ್ನು ಒಳಗೊಂಡು ರಚಿತವಾದುದಾಗಿದೆ.
ಈ ಪಟ್ಟಿಯಲ್ಲಿ ಏರ್ ಇಂಡಿಯಾ ಉಂಟಾ?
ಮೇಲೆ ಹೇಳಿದ safest ವಿಮಾನಯಾನದ ಎರಡೂ ವಿಭಾಗಗಳಲ್ಲಿ ಕೂಡಾ ಏರ್ ಇಂಡಿಯಾ ಟಾಪ್ 25ರ ಸುರಕ್ಷಿತ ವಿಮಾನಯಾನ ಸಂಸ್ಥೆಗಳಲ್ಲಿ ಸ್ಥಾನ ಪಡೆದಿಲ್ಲ. ಇಂಡಿಗೋ ನಂತಹ ಅತ್ಯಂತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ ಅನ್ನೋದು ಸೋಜಿಗದ ಅಂಶ.
2025ರ Top 10 ಸುರಕ್ಷಿತ ವಿಮಾನಯಾನ ಸಂಸ್ಥೆ (ಪೂರ್ಣ-ಸೇವಾ ವಿಭಾಗ)
1. ಏರ್ ನ್ಯೂಜಿಲೆಂಡ್
2. ಕ್ವಾಂಟಾಸ್
3. ಕ್ಯಾಥೆ ಪೆಸಿಫಿಕ್, ಕತಾರ್ ಏರ್ವೇಸ್, ಎಮಿರೇಟ್ಸ್
4. ವರ್ಜಿನ್ ಆಸ್ಟ್ರೇಲಿಯಾ
5. ಎತಿಹಾಡ್ ಏರ್ವೇಸ್
6. ಆಲ್ ನಿಪ್ಪಾನ್ ಏರ್ವೇಸ್ (ANA)
7. EVA
8. ಕೊರಿಯನ್ ಏರ್
9. ಅಲಾಸ್ಕಾ ಏರ್‌ಲೈನ್ಸ್
10. ಟರ್ಕಿಶ್ ಏರ್‌ಲೈನ್ಸ್
2025ರ ಟಾಪ್ 10 ಸುರಕ್ಷಿತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳು
1. HK ಎಕ್ಸ್‌ಪ್ರೆಸ್
2. ಜೆಟ್‌ಸ್ಟಾರ್ ಗ್ರೂಪ್
3. ರಯಾನೇರ್
4. ಈಸಿಜೆಟ್
5. ಫ್ರಾಂಟಿ ಯರ್ ಏರ್ ಲೈನ್ಸ್
6. ಏರ್ ಏಷ್ಯಾ
7. ವಿಜ್ ಏರ್
8. ವಿಯೆಟ್ ಜೆಟ್ ಏರ್
9. ಸೌತ್‌ವೆಸ್ಟ್ ಏರ್‌ಲೈನ್ಸ್
10. ವೊಲಾರಿಸ್
ಭಾರತೀಯ ವಿಮಾನಯಾನ ಸಂಸ್ಥೆಗಳ ಸುರಕ್ಷತಾ ಮಾನದಂಡ
ಭಾರತದ ಪ್ರಮುಖ ವಿಮಾನ ಸಂಸ್ಥೆಗಳನ್ನು ಪ್ರಸ್ತುತ ಹೇಗೆ ರೇಟಿಂಗ್ ಮಾಡಲಾಗಿದೆ ಎಂಬ ಕುರಿತು AirlineRatings.com ಡೇಟಾವನ್ನು ಬಿಡುಗಡೆ ಮಾಡಿದೆ. ಈ ಪಟ್ಟಿ ತಯಾರಿಸಲು ಬಳಸಿದ 7 ಸ್ಟಾರ್ ವಿಮಾನಯಾನ ಸುರಕ್ಷತಾ ರೇಟಿಂಗ್ ವ್ಯವಸ್ಥೆಯು 3 ಪ್ರಮುಖ ಸ್ತಂಭಗಳನ್ನು ಆಧರಿಸಿದೆ. ಪೈಲಟ್-ಸಂಬಂಧಿತ ಸುರಕ್ಷತೆ, ಮಾರಕ ಅಪಘಾತಗಳು ಮತ್ತು ಜಾಗತಿಕ ಲೆಕ್ಕಪರಿಶೋಧನಾ ಕಾರ್ಯಕ್ಷಮತೆ – ಈ ಮೂರು ಅಂಶಗಳು. ಪಟ್ಟಿಯ ಪ್ರಕಾರ, ಸ್ಟೈಸ್‌ಜೆಟ್ 7 ರಲ್ಲಿ 7 ಸ್ಟಾರ್ ಗಳೊಂದಿಗೆ ಭಾರತೀಯ ವಾಹಕಗಳಲ್ಲಿ ಮುಂಚೂಣಿಯಲ್ಲಿದೆ. ಇಂಡಿಗೋ ಮತ್ತು ಆಕಾಶ ಏರ್ ಎರಡೂ 7 ರಲ್ಲಿ 6 ಸ್ಟಾರ್‌ಗಳನ್ನು ಪಡೆದಿವೆ.
ಇದನ್ನೂ ಓದಿ:Udupi: ಮಳೆ ರಜೆ ಸರಿದೂಗಿಸಲು 10 ಶನಿವಾರ ಬಲಿ: ಶಿಕ್ಷಣ ಇಲಾಖೆ ನಿರ್ಧಾರ
