4
Udupi: ಗಂಗೊಳ್ಳಿಯ ಹೊಸಾಡು ಗ್ರಾಮದ ಗುಹೇಶ್ವರ ದೇಗುಲಕ್ಕೆ ಹೋಗುವ ಕ್ರಾಸ್ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಅಕ್ರಮವಾಗಿ ದನ ಮಾಂಸ ಸಾಗಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ.
ಗಂಗೊಳ್ಳಿ ಮೀನು ಮಾರ್ಕೆಟ್ ಬಳಿಯ ಅಬ್ದುಲ್ ರಹೀಂ ಬಂಧಿತ ಆರೋಪಿ. ಈತ ದನ ಕರುಗಳನ್ನು ಕೂಡಾ ಕಳ್ಳತನಗೈದು ಅಕ್ರಮವಾಗಿ ಸಾಗಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಈತನಿಂದ ಸ್ಕೂಟರ್ ಮತ್ತು ಎಪ್ಪತ್ತೈದು ಸಾವಿರ ರೂ. ಮೌಲ್ಯದ ಇಪ್ಪತ್ತೈದು ಕೆಜಿ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
