Home » Madenuru Manu: ‘ನನ್ನ ಆಯಸ್ಸನ್ನು ದೇವರು ಶಿವಣ್ಣನಿಗೆ ಕೊಡಲಿ’ – ಡಾ.ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಅಧ್ಯಕ್ಷರ ಬಳಿ ತೆರಳಿ ಮಡೆನೂರು ಮನು ಕ್ಷಮೆಯಾಚನೆ !!

Madenuru Manu: ‘ನನ್ನ ಆಯಸ್ಸನ್ನು ದೇವರು ಶಿವಣ್ಣನಿಗೆ ಕೊಡಲಿ’ – ಡಾ.ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಅಧ್ಯಕ್ಷರ ಬಳಿ ತೆರಳಿ ಮಡೆನೂರು ಮನು ಕ್ಷಮೆಯಾಚನೆ !!

by V R
0 comments

Madenuru Manu: ಮಡೆನೂರು ಮನು ಅವರ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದ ಕಾರಣ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಇದೀಗ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಮೊದಲು ಅವರು ಸ್ಟಾರ್ ಹೀರೋಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಆಡಿಯೋನ ಈ ಸಂದರ್ಭದಲ್ಲಿ ವೈರಲ್ ಮಾಡಲಾಗಿತ್ತು. ಆರಂಭದಲ್ಲಿ ಇದು ನನ್ನ ಆಡಿಯೋ ಅಲ್ಲ ಎಂದು ವಾದಿಸುತ್ತಿದ್ದ ಮನು ಅವರು ಈಗ ಮನು ಅದು ತಮ್ಮದೇ ಆಡಿಯೋ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ವೈರಲ್ ಆಗಿದ್ದ ಆಡಿಯೋದಲ್ಲಿ ಶಿವರಾಜ್ ಕುಮಾರ್ ಇನ್ನೊಂದು ಆರು ವರ್ಷ, ಸತ್ತು ಹೋಗ್ತಾರೆ ಅಂತ ನಂಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದೆಂಟು ವರ್ಷ. ದರ್ಶನ್ ಸತ್ತೋದ. ದರ್ಶನ್ ಸರ್‌ ಇನ್ನೊಂದು ಆರು ವರ್ಷ. ಕ್ರೇಜ್ ಇರುತ್ತೆ, ಸಿನಿಮಾ ಓಡಲ್ಲ. ಅವರು ಮೂರು ಜನರ ಮಧ್ಯೆ ಕಾಂಪಿಟೇಶನ್ ಕೊಡೋಕೆ ಬಂದಿರೋ ಗಂಡುಗಲಿ ನಾನು ಎಂದು ಹೇಳುತ್ತಾರೆ. ಇದೀಗ ಮಾಧ್ಯಮಗಳ ಮುಂದೆ ಬಂದು ತಪ್ಪಕೊಂಡಿರುವ ನಡೆನೂರು ಮನು ಅವರು ಎಲ್ಲರ ಕ್ಷಮೆ ಕೇಳಿದ್ದಾರೆ.

ಹೌದು, ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್‌.ಆರ್.ರಮೇಶ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯ ವಿಡಿಯೋದಲ್ಲಿ ಮೂರು ಸ್ಟಾರ್‌ಗಳ ಬಗ್ಗೆ ಮನು ಮಾತನಾಡಿದ್ದಾರೆ. ದೊಡ್ಮನೆಯ ದೊಡ್ಮಗ ಶಿವರಾಜ್ ಕುಮಾರ್, ನಟ ದರ್ಶನ್ ಮತ್ತು ಧ್ರುವ ಸರ್ಜಾ ಅವರ ಕುರಿತು ವಿವಾದಾತ್ಮಕವಾಗಿ ಮಾತನಾಡಿದ್ದ ಮಡೆನೂರು ಮನು ಇಂದು ಬೇಷರತ್ ಕ್ಷಮೆ ಯಾಚಿಸಲು ಬಂದಿದ್ದಾಗಿ ಎನ್‌.ಆರ್.ರಮೇಶ್ ಅವರು ತಿಳಿಸಿದ್ದಾರೆ.

ಬಹಿರಂಗವಾಗಿ ಕ್ಷಮೆ ಕೇಳಿರುವ ಮಡೆನೂರು ಮನು ಕಲೆ ನಂಬಿ ಬಂದ ನನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡಿದ್ದಾರೆ. ನಾನು ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ಇದೆಲ್ಲವು ಷಡ್ಯಂತ್ರ ಎಂದು ದೂರಿದ್ದಾರೆ. ನಾನು ಒಬ್ಬ ಜೂನಿಯರ್ ಆರ್ಟಿಸ್ಟ್ ಆಗಿ ಒಂದೂವರೆ ದಶಕದಿಂದ ಕೆಲಸ ಮಾಡಿದ್ದೇನೆ. ಸಿಕ್ಕ ಇತರ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ನಮ್ ಹಳ್ಳ ನಾವೇ ತೋಡಿಕೊಳ್ಳೋದಿಲ್ಲ. ಇದೆಲ್ಲವು ಷಡ್ಯಂತ್ರ ನಡೆದಿದೆ. ಎರಡು ತಿಂಗಳ ಹಿಂದೆ ಮಾಡಿದ್ದ ಆಡಿಯೋ ವೈರಲ್ ಮಾಡಿದ್ದಾರೆ. ಯಾಕೆ ಅದರ ಉದ್ದೇಶವೆಂಬುದು ತನಿಖೆಯಿಂದ ತಿಳಿಯಬೇಕು. ನನ್ನಿಂದ ಈ ಆಡಿಯೋದಿಂದ ನಟ ಶಿವಣ್ಣಗೆ, ಗೀತಕ್ಕ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಟ ದರ್ಶನ್ ಸರ್‌, ಧ್ರುವ ಸರ್ಜಾ ಅಣ್ಣ ಅವರಿಗೆ, ಮತ್ತು ಮೂವರು ಸ್ಟಾರ್ ನಟರ ಅಭಿಮಾನಿಗಳು ಮನಸ್ಸಿಂದ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ನನ್ನ ಸಿನಿಮಾ ಬಿಡುಗಡೆ ವೇಳೆ ನೀವು ಶಿವಣ್ಣ, ಧ್ರುವ, ದರ್ಶನ್ ಅವರ ಅಭಿಮಾನಿಗಳು ತಾಳ್ಮೆಯಿಂದ ಇದ್ದಿದ್ದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಮೂರು ಸ್ಟಾರ್ ನಟರ ಸಾವನ್ನು ಬಯಸಿಲ್ಲ. ಬೇರೆಯವರ ಸಾವು ಬಯಸುವ ಅಧಿಕಾರ ನನಗಿಲ್ಲ. ಅಣ್ಣಾವ್ರ ಮನೆ ಆಶೀರ್ವಾದ ಸಿಕ್ಕಿದೆ ಅಂತ ಹೇಳಿದ್ದೇ. ನನ್ನ ಆಯಸ್ಸು ಶಿವಣ್ಣ ಅವರಿಗೆ ಕೊಡಲಿ. ಶಿವಣ್ಣ ಅವರಿಗೆ ಆರೋಗ್ಯ ಆಯಸ್ಸು ಕೊಡಲಿ. ಶಿವಣ್ಣ ಇಂಡಸ್ಟ್ರಿಗೆ ಆಲದಮರ ಇದ್ದಂತೆ ಎಂದು ಬಾಯ್ತುಂಬಾ ಹೊಗಳಿದ್ದಾರೆ.

ಅಲ್ಲದೆ ನಟ ದರ್ಶನ್ ಅವರ ಕ್ರೇಜ್ ಯಾವತ್ತು ಕಡಿಮೆ ಆಗಲ್ಲ, ಇನ್ನು ಹೆಚ್ಚಾಗುತ್ತೆ. ನಟ ಧ್ರವ ಸರ್ಜಾ ಅವರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಪೋಸ್ಟರ್ ಲಾಂಚ್ ಮಾಡಿ ಫ್ಯಾನ್ಸ್ ಪೇಜಿನಲ್ಲಿ ಹಾಕಿ ಕೊಟ್ಟಿದ್ದಾರೆ. ಅವರ ಋಣ ಯಾವತ್ತು ನನ್ನ ಮೇಲಿರುತ್ತೆ. ಮೂರು ಜನರ ಆರ್ಶೀವಾದ ಪಡೆದು ಬೆಳೆಯಬೇಕು ಅಂದುಕೊಂಡೆ. ಅದರೆ ಅವರ ಹೆಸರಿನಿಂದಲೇ ನನ ವಿರುದ್ಧ ಷಡ್ಯಂತ್ರ ನಡೆದಿದೆ. ಕ್ಷಮಿಸಿ..ಕ್ಷಮಿಸಿ..ಮನಸ್ಸಿನಿಂದ ಕೇಳಿಕೊಳ್ಳುತ್ತಿದ್ದೇನೆ ಎಂದು ಪರಿ ಪರಿಯಾಗಿ ಮನು ಬೇಡಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ನಾನು ಕಲೆ ನಂಬಿ ಬಂದಿದ್ದೇನೆ. ತಪ್ಪನ್ನು ತಿದ್ದುಕೊಳ್ಳುತ್ತೇನೆ. ಮತ್ತೆ ಬದಲಾಗಿ ತೋರಿಸುತ್ತೇನೆ. ಕಿರುತೆರೆ, ಪರದೆ ಮೇಲೆ ನನಗೆ ಅವಕಾಶ ಕೊಡಿ ಎಂದು ಮನು ಕೇಳಿ ಕೊಂಡಿದ್ದಾರೆ. ಆಡೀಯೋ ಸೇರಿದಂತೆ ತಮ್ಮ ಮೇಲಿನ ಇತರ ಆರೋಪ ನ್ಯಾಯಾಲಯದಲ್ಲಿದ್ದು ತನಿಖೆಯಿಂದ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ:Gujarath : ರಾಯಲ್ ಎನ್‌ಫೀಲ್ಡ್ ಬೈಕ್‌ನೊಂದಿಗೆ ನಡೆಯಿತು 18 ವರ್ಷದ ಯುವಕನ ಅಂತ್ಯಕ್ರಿಯೆ!!

You may also like