12
Bantwala: ಜೂ.21ರಂದು ಬಂಟ್ವಾಳ (Bantwala) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ. ಕ್ರ:73/2025 ಕಲಾಂ 125 ಬಿ ಏನ್ ಎಸ್ ಪ್ರಕರಣದ ಘಟನೆಗೆ ಸಂಬಂಧಿಸಿದಂತೆ, “ಮುಸ್ಲಿಂ ಯುವ ಬಳಗ” ಎಂಬ ಹೆಸರಿನ ವಾಟ್ಸಾಪ್ ಗ್ರೂಪಿನಲ್ಲಿ ಝಿಯಾದ್ ಉಮ್ಮಿ ಎಂಬ ಹೆಸರಿನ ವ್ಯಕ್ತಿಯೋರ್ವ “ಸಜಿಪ ದೇರಾಜೆ ರಸ್ತೆಯ ಮಧ್ಯೆ ಯುವಕರಿಬ್ಬರ ಮೇಲೆ ದಾಳಿಗೆ ಯತ್ನ ಘಟನಾ ಸ್ಥಳದಲ್ಲಿ ಸೇರಿದ ಜನರಿಂದ ಆಕ್ರೋಶ” ಎಂಬುದಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ ಸಾರ್ವಜನಿಕರಿಗೆ ಭಯ ಭೀತಿಯನ್ನುಂಟು ಮಾಡಿದ ಆರೋಪದಲ್ಲಿ ಝಿಯಾದ್ ಉಮ್ಮಿ ಎಂಬ ಹೆಸರಿನಲ್ಲಿ ಸಂದೇಶ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂಬ್ರ : 74/2025, ಕಲಂ: 240 BNS ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಇದು ಪೊಲೀಸರು ತಿಳಿಸಿದ್ದಾರೆ.
