Mangalore: ಮಂಗಳೂರಿನ ಬಿಜೈನಲ್ಲಿರುವ ಪಿಂಟೋ ಚೇಂಬರ್ಸ್‌ನ ಎರಡನೇ ಮಹಡಿಯಲ್ಲಿರುವ ಉಡುಪಿಯ ಬ್ರಹ್ಮಗಿರಿ ನಿವಾಸಿ ಶ್ರೀ ಸುದರ್ಶನ್ ಅವರ ಸಿಕ್ತ್ಸ್ ಸೆನ್ಸ್ ಬ್ಯೂಟಿ ಸಲೂನ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿರುವ ಕುರಿತು ವರದಿಯಾಗಿದೆ.
ದಾಳಿಯ ನಂತರ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಪ್ರಸ್ತುತ ತನಿಖೆಯಲ್ಲಿದೆ.
ಸದರಿ ಬ್ಯೂಟಿ ಸಲೂನ್‌ಗೆ ನೀಡಲಾಗಿರುವ ವ್ಯಾಪಾರ ಪರವಾನಗಿಯನ್ನು ರದ್ದು ಮಾಡುವಂತೆ ಮಂಗಳೂರು ನಗರ ನಿಗಮದ ಆಯುಕ್ತರಿಗೆ ಸಲ್ಲಿಸಲಾಗಿದೆ. ಸಿಕ್ಸ್ತ್ ಸೆನ್ಸ್ ಬ್ಯೂಟಿ ಸಲೂನ್‌ನ ವ್ಯಾಪಾರ ಪರವಾನಗಿಯನ್ನು ರದ್ದು ಮಾಡಲಾಗಿರುವ ಕುರಿತು ವರದಿಯಾಗಿದೆ.
ಇದನ್ನೂ ಓದಿ: Crime: ಯೂಟ್ಯೂಬ್ ಐಡಿಯಾ ಕೊಡ್ತು – ಮಲಗಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ ಸುರಿದಳು ಮಹಿಳೆ
