Home » Accident: ಕಾರವಾರದಲ್ಲಿ ಲಾರಿ ಹಾಗೂ ಬಸ್ ಮಧ್ಯೆ ಭೀಕರ ಅಪಘಾತ

Accident: ಕಾರವಾರದಲ್ಲಿ ಲಾರಿ ಹಾಗೂ ಬಸ್ ಮಧ್ಯೆ ಭೀಕರ ಅಪಘಾತ

0 comments

Accident: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಬೈಲ ಘಟ್ಟದಲ್ಲಿ ಲಾರಿ ಹಾಗೂ ಬಸ್ ಮಧ್ಯೆ ಬಿಕರ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೇ ಬಸ್ ಪಲ್ಟಿಯಾಗಿದೆ.

ಬಸ್ಸು ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದು 25 ಜನ ಪ್ರಯಾಣಿಕರಿದ್ದರು ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಘಟನೆಯಿಂದಾಗಿ ಮಾರ್ಗದಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು ಇದೀಗ ಪೊಲೀಸರು ತೆರವುಗೊಳಿಸಿದ್ದಾರೆ ಹಾಗೂ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Rain: ಕರಾವಳಿ ಸೇರಿದಂತೆ ‌ರಾಜ್ಯದಾದ್ಯಂತ ಜೂ.27ರವರೆಗೆ ಭಾರೀ ಮಳೆ

You may also like