Home » Ranchi: ಮನೆಗೆ ಬಂದು ರೂಮಿನೊಳಗೆ ಸೇರಿಕೊಂಡ ಹುಲಿ!

Ranchi: ಮನೆಗೆ ಬಂದು ರೂಮಿನೊಳಗೆ ಸೇರಿಕೊಂಡ ಹುಲಿ!

0 comments

Ranchi: ಸಾಮಾನ್ಯವಾಗಿ ಮನೆಯೊಳಗೆ ಅಥವಾ ಕೋಣೆಯೊಳಗೆ ನಾಯಿ ಬೆಕ್ಕು ಸೇರಿಕೊಳ್ಳುವುದನ್ನು ನೋಡಿರುತ್ತೇವೆ, ಇನ್ನು ಅರಣ್ಯ ಪ್ರದೇಶಗಳಲ್ಲಿ ಮನೆ ಇದ್ದರೆ ಮಳೆಗಾಲದಲ್ಲಿ ಹಾವುಗಳು ಕೂಡ ಬರುವುದುಂಟು. ಆದರೆ ಮನೆಯ ರೂಮಿನೊಳಗೆ ಹುಲಿ ಸೇರಿಕೊಂಡಿರುವ ಘಟನೆ ಎಂದು ರಾಂಚಿಯಲ್ಲಿ ನಡೆದಿದೆ.

ರಾಂಚಿಯ ಮರ್ದು ಗ್ರಾಮದಲ್ಲಿ ವಾಸಿಸುವ ಪುರಂದರ್ ಮಹತೋ ಎಂಬುವವರು ತಮ್ಮ ಕೋಣೆಯಿಂದ ವಿಚಿತ್ರ ಶಬ್ದ ಕೇಳಿಸುತ್ತಿದೆ ಎಂದು ಕೋಣೆಯೊಳಗೆ ಇಣುಕಿ ನೋಡಿದಾಗ ದೈತ್ಯ ಹುಲಿ ಕಣ್ಣಿಗೆ ಬಿದ್ದಿದ್ದು, ಹುಲಿಯನ್ನು ಕೆರಳಿಸದೆ ಮತ್ತು ಯಾವುದೇ ಶಬ್ದ ಮಾಡದೆ ಹೊರಗಿನಿಂದ ಕೋಣೆಯ ಬಾಗಿಲನ್ನು ಮುಚ್ಚಿ ಬಹಳ ಎಚ್ಚರಿಕೆಯಿಂದ ಹೊರಗೆ ಬಂದು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ಬಂದ ತಕ್ಷಣ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಲುಪಿ ಅರಿವಳಿಕೆ ಇಂಜೆಕ್ಷನ್ ನೀಡುವ ಮೂಲಕ ಹುಲಿಯನ್ನು ರಕ್ಷಿಸಿತು. ಹುಲಿಯನ್ನು ರಕ್ಷಿಸಲು ಪಲಮು ಹುಲಿ ಅಭಯಾರಣ್ಯದಿಂದ ಅರಣ್ಯ ಇಲಾಖೆಯ ವಿಶೇಷ ತಂಡವನ್ನು ಕರೆಸಲಾಯ್ತು. ಈ ಘಟನೆಯ ನಂತರ, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಜಾರ್ಖಂಡ್‌ನ ಗರ್ವಾ ಮತ್ತು ಲತೇಹಾರ್ ಜಿಲ್ಲೆಗಳಲ್ಲಿ ಚಿರತೆಯಿಂದ ಜನರು ಹಿಂದೆ ತುಂಬಾ ತೊಂದರೆಗೊಳಗಾಗಿದ್ದರು. ಆರೇಳು ಮಂದಿಯನ್ನು ಅದು ಹತ್ಯೆ ಕೂಡ ಮಾಡಿತ್ತು.

ಇದನ್ನೂ ಓದಿ;Haveri: ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ಹಾವೇರಿಯ ವ್ಯಕ್ತಿ

You may also like