Petrol Bunk: ಆಂಡ್ರಾಯ್ಡ್ ಮತ್ತು ಐಫೋನ್‌ಗಳು ಸೇರಿದಂತೆ ಎಲ್ಲಾ ಆಧುನಿಕ ಸ್ಮಾರ್ಟ್‌ಫೋನ್‌ಗಳು “ಏರ್‌ಪ್ಲೇನ್ ಮೋಡ್” (ಅಥವಾ “ಫ್ಲೈಟ್ ಮೋಡ್”) ಸೆಟ್ಟಿಂಗ್ ಅನ್ನು ಹೊಂದಿವೆ. ಹೆಚ್ಚಿನ ಜನರು ವಿಮಾನಗಳಲ್ಲಿ ಸಂಚರಿಸುವ ಸಂದರ್ಭ, ಅದೂ ವಿಮಾನ ಟೇಕ್ ಆಫ್ ಮತ್ತು ಲ್ಯಾಂಡ್ ಆಗುವ ವೇಳೆ ಸ್ವಿಚ್ ಆಫ್ ಮಾಡಲು ಅಂತ ಅಂದುಕೊಂಡಿರುತ್ತಾರೆ. ಅಲ್ಲದೆ, ವಿಮಾನ ಹೊರಡುವ ಮತ್ತು ಇಳಿಯುವ ಸಂದರ್ಭಗಳಲ್ಲಿ ಮೊಬೈಲ್ ಅನ್ನು ಫ್ಲೈಟ್ ಮೋಡ್ ಅಥವಾ ಏರ್‌ಪ್ಲೇನ್ ಮೋಡ್ ಗೆ ಇಡಲು ಸೂಚನೆ ಕೊಡುತ್ತಾರೆ.
ಈಗ, ಏರ್‌ಪ್ಲೇನ್ ಮೋಡ್ ಅನ್ನು ಯಾವಾಗ ಬಳಸಬೇಕು? ಯಾಕೆ ಏರ್‌ಪ್ಲೇನ್ ಮೋಡ್ ಬೇಕಿರುವುದು? ಸ್ವಿಚ್ ಆಫ್ ಮಾಡಬಹುದಲ್ಲವೇ? ಎನ್ನುವ ಪ್ರಶ್ನೆ ಏಳುತ್ತದೆ. ಈ ಎರಡರ ಮಧ್ಯದ ವ್ಯತ್ಯಾಸ ಏನು ಮತ್ತು ಯಾವುದನ್ನು ಯಾವಾಗ ಬಳಸಬೇಕು ಅನ್ನೋದನ್ನು ನೋಡೋಣ.
ಈ ವೈಶಿಷ್ಟ್ಯವು ಸೆಲ್ಯುಲಾರ್, ವೈ-ಫೈ ಮತ್ತು ಬ್ಲೂಟೂತ್‌ನಂತಹ ಎಲ್ಲಾ ವೈರ್‌ಲೆಸ್ ಸಂವಹನವನ್ನು ನಿಷ್ಕ್ರಿಯಗೊಳಿಸುತ್ತದೆ. ವಿಮಾನಗಳ ಏರಿಳಿಯುವ ಸಮಯದಲ್ಲಿ ವೈರ್‌ಲೆಸ್ ಸಿಗ್ನಲ್‌ಗಳನ್ನು ನಿಯಂತ್ರಿಸಲಾಗುತ್ತದೆ. ಆಗ ಮೊಬೈಲ್ ಅನ್ನು ಫ್ಲೈಟ್ ಮೋಡ್ ಗೆ ಹಾಕಿಟ್ಟರೆ ಸಾಕು. ಈ ಸಂದರ್ಭ ನಿಮ್ಮ ಮೊಬೈಲಿನಲ್ಲಿ ಇತರ ಆಟಗಳು, ಆಡಿಯೋ ವೀಡಿಯೊಗಳು, ಓದು ಮತ್ತು ಇತರ ರೇಡಿಯೋ ಸಿಗ್ನಲ್ ಗಳು ಬೇಡದ ಸಾಮಾನ್ಯ ಕಾರ್ಯಗಳನ್ನು ನಿರಾತಂಕವಾಗಿ ಮಾಡಬಹುದು. ಇಂಥಹಾ ಕಾರ್ಯಗಳಿಗೆ ಮೊಬೈಲ್ ಫೋನ್ ಅನ್ನು ಸುರಕ್ಷಿತವಾಗಿ ಬಳಸಲು ನಿಮಗೆ ಅನುಮತಿ ನೀಡಲಾಗುತ್ತದೆ.
ವಿಮಾನದ ಸಂವಹನ ವ್ಯವಸ್ಥೆಗಳೊಂದಿಗೆ, ಮೊಬೈಲಿನ ಸಿಗ್ನಲ್ ಗಳು ಹಸ್ತಕ್ಷೇಪ ಮಾಡುವ ಸಾಧ್ಯತೆ ಇರುವುದನ್ನು ತಡೆಗಟ್ಟಲು ವಿಮಾನ ಮೋಡ್ (ಏರ್‌ಪ್ಲೇನ್) ಹಾಕಲು ಒತ್ತಾಯಿಸುವುದು. ಹಾಗಾಗಿ ಇಲ್ಲಿ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡುವ ಆಗತ್ಯ ಇಲ್ಲ. ಕೆಲವರು ತಮ್ಮ ಮೊಬೈಲಿನ ಬ್ಯಾಟರಿ ಖಾಲಿಯಾಗುತ್ತಿದ್ದು, ಅದನ್ನು ಉಳಿತಾಯ ಮಾಡಲು ಕೂಡಾ ಏರ್‌ಪ್ಲೇನ್ ಮೋಡ್ ಗೆ ಹಾಕೋದು ಅಥವಾ ಸಿಗ್ನಲ್ ಆಫ್ ಮಾಡಿ ಇಡೋದನ್ನು ಮಾಡುತ್ತಾರೆ.
ಮೊಬೈಲ್ ಆನ್ ಇದ್ದರೆ ಅದು ನಿರಂತರವಾಗಿ ನಮ್ಮ ಪರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಮುಖ್ಯವಾಗಿ ಅದು ಸುತ್ತ ಮುತ್ತ. ಸಿಗ್ನಲ್ ಗಳನ್ನ ಹುಡುಕುತ್ತಲೇ ಇರುತ್ತದೆ. ಆ ಸಂದರ್ಭ ಹೆಚ್ಚಿನ ಬ್ಯಾಟರಿ ಖರ್ಚಾಗುತ್ತದೆ. ಆದರೆ ಏರ್‌ಪ್ಲೇನ್ ಮೋಡ್ ನಲ್ಲಿ ಸಿಗ್ನಲ್ ಇಲ್ಲದ ಮೂಲಕ ಕೂಡಾ ನಡೆಯಬಲ್ಲ ಕೆಲಸ ಕಾರ್ಯಗಳು ನಡೆಯುತ್ತಲೇ ಇರುವ ಕಾರಣ ಇನ್ನೂ ಬ್ಯಾಟರಿಯ ಖರ್ಚು ಆಗುತ್ತಲೇ ಇರುತ್ತದೆ.
ಯಾವಾಗ ಫೋನ್ ಸ್ವಿಚ್ ಆಫ್ ಮಾಡಬೇಕು?
ಕೆಲವು ಪ್ರದೇಶಗಳಲ್ಲಿ, ಸಂದರ್ಭಗಳಲ್ಲಿ ಫೋನ್ ಅನ್ನು ಏರ್‌ಪ್ಲೇನ್ ಮೋಡ್ ಗೆ ಹಾಕಿದರೆ ಸಾಕಾಗಲ್ಲ. ಮೊದಲೇ ಹೇಳಿದಂತೆ, ಹೆಚ್ಚಿನ ಬ್ಯಾಟರಿ ಉಳಿತಾಯ ಆಗಲು ಫೋನ್ ಅನ್ನು ಸ್ವಿಚ್ ಆಫ್ ಇಡೋದು ಅಗತ್ಯ. ಇನ್ನುಳಿದಂತೆ, ಅತ್ಯಂತ ಅಪಾಯಕಾರಿ ಸ್ಥಳಗಳಾದ, ಗಾಳಿಯಲ್ಲಿ ಪೆಟ್ರೋಲ್ ಗ್ಯಾಸ್ ಇತ್ಯಾದಿ ಉರುವಲು ಆವಿಯ ಅಂಶ ಇರುವ ಕಡೆಗಳಲ್ಲಿ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಇಡೋದು ಸೇಫ್. ಫ್ಲೈಟ್ ಮೋಡ್ ಇಟ್ರೆ ಸಿಗ್ನಲ್ ಇಲ್ಲದೆ ಇರೋದರಿಂದ ಬೆಂಕಿ ಉಂಟಾಗಲ್ಲ ಅನ್ನೋದು ಸತ್ಯ, ಆದರೂ ಹೆಚ್ಚಿನ ಪ್ರಮಾಣದ ಇಂತನ ಗಾಳಿಯಲ್ಲಿದ್ದು ಅದು ಮೊಬೈಲ್ ಆನ್ ಆಗಿರುವ ಕಾರಣ ಸಂಪರ್ಕಕ್ಕೆ ಬಂದು ಸ್ಫೋಟ ಸಂಭವಿಸಬಹುದು. ಸಾಧ್ಯತೆಗಳು ಕಮ್ಮಿ ಇದ್ದರೂ, ಈ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಪೆಟ್ರೊಲ್ ಬಂಕ್, ಗ್ಯಾಸ್ ಫಿಲ್ಲಿಂಗ್ ಸ್ಟೇಶನ್ ನಲ್ಲಿ ಹೇಗೆ?
ಇನ್ನು, ಪೆಟ್ರೊಲ್ ಬಂಕ್ ಮತ್ತು ಗ್ಯಾಸ್ ಫಿಲ್ಲಿಂಗ್ ಸ್ಟೇಶನ್ ನಲ್ಲಿ ಏನು ಮಾಡಬೇಕು? ಏರ್ ಪ್ಲೇನ್ ಮೋಡ್ ಇಟ್ರೆ ಸಾಕಾ ಅಥವಾ ಸ್ವಿಚ್ ಆಫ್ ಮಾಡಬೇಕಾ ಅಂತ ಕೇಳಬಹುದು. ಖಂಡಿತವಾಗಿಯೂ ಪೆಟ್ರೋಲ್ ಬಂಕ್ ಮುಂತಾದ ಇಂಧನ ಇರುವ ಜಾಗಗಳಲ್ಲಿ, ಜತೆಗೆ ಸಾಲ್ವೆಂಟ್ ಇರುವ ಸ್ಥಾವರಗಳಲ್ಲಿ, ಅಥವಾ ಅವುಗಳನ್ನು ಸ್ಟೋರ್ ಮಾಡಿಟ್ಟ ಪ್ರದೇಶಗಳಲ್ಲಿ ಏರ್ ಪ್ಲೇನ್ ಮೋಡ್ ಸಾಕಾಗುವುದಿಲ್ಲ. ಅಲ್ಲಿ ಫೋನ್ ಅನ್ನು ಪೂರ್ತಿ ಸ್ವಿಚ್ ಆಫ್ ಮಾಡಿ ಇಡಲು ಸುರಕ್ಷತಾ ನಿರ್ದೇಶನಗಳೇ ಒತ್ತಿ ಹೇಳಿವೆ.
ಫೋನ್ ನ ಅಗತ್ಯ ಇಲ್ಲವೇ ಇಲ್ಲ ಅನ್ನುವ ಸಂದರ್ಭಗಳಲ್ಲಿ ಫೋನನ್ನು ಸ್ವಿಚ್ ಆಫ್ ಮಾಡಿ ಇಡಿ. ಆಟಕ್ಕೆ ಓದಿಗೆ ಮತ್ತು ಸಿಗ್ನಲ್ ಮತ್ತು ಇಂಟರ್ನೆಟ್ ಇಲ್ಲದೆ ಮಾಡಬಹುದಾದ ಇತರ ಕಾರ್ಯಗಳಿಗೆ ಫೋನನ್ನು ಬಳಸಬೇಕಾಗಿದ್ದರೆ ಆಗ ಫ್ಲೈಟ್ ಮೋಡ್ ಗೆ ಹಾಕಿ ನಿಮ್ಮ ಕೆಲಸ ಮುಂದುವರಿಸಿ. ಅಲ್ಲದೆ, ಅಕ್ಕಪಕ್ಕ ಅತ್ಯಂತ ಪುಟಾಣಿ ನವಜಾತ ಶಿಶುಗಳು ಇದ್ದರೆ, ಆ ಸಂದರ್ಭಗಳಲ್ಲಿ ಸಿಗ್ನಲ್ ಆಫ್ ಮಾಡಿ ಅಥವಾ ಏರೋಪ್ಲೇನ್ ಮೋಡ್ ಗೆ ಹಾಕಿ.
ಫೋನ್ ಒಂದು ಅದ್ಭುತ ಮತ್ತು ಸುಲಭ ಸಂಹವನ ಸಾಧನ. ಸುರಕ್ಷತೆಯ ಅಗತ್ಯ ನೋಡಿಕೊಂಡು, ಅದನ್ನು ಬಳಸಿದರೆ ನಾವೂ ಸೇಫ್ ಪಕ್ಕದಲ್ಲಿದ್ದವರೂ ಸುರಕ್ಷಿತ!
ಇದನ್ನೂ ಓದಿ: Manjeshwara: ತಾಯಿಯನ್ನು ಮಲಗಿದ್ದಲ್ಲೇ ಪೆಟ್ರೋಲ್ ಹಚ್ಚಿ ಕೊಲೆಗೈದ ಪ್ರಕರಣ: ಹತ್ಯೆ ಕಾರಣ ಬಹಿರಂಗ
