Home » Sullia: ಸುಳ್ಯ ತಾಲೂಕು ತುಳುವ ಮಹಾಸಭೆಗೆ ಸಾಮಾಜಿಕ ನಾಯಕ ಮಿಲನ್ ಗೌಡ ಬಾಳಿಕಳ ಸಂಚಾಲಕರಾಗಿ ಆಯ್ಕೆ

Sullia: ಸುಳ್ಯ ತಾಲೂಕು ತುಳುವ ಮಹಾಸಭೆಗೆ ಸಾಮಾಜಿಕ ನಾಯಕ ಮಿಲನ್ ಗೌಡ ಬಾಳಿಕಳ ಸಂಚಾಲಕರಾಗಿ ಆಯ್ಕೆ

0 comments

Sullia: ತುಳುನಾಡಿನ ಭಾಷಾ–ಸಂಸ್ಕೃತಿ ಉಳಿವಿಗೆ ಶತಮಾನ ಪರಂಪರೆಯ ಪೂರಕ ವೇದಿಕೆಯಾಗಿರುವ ತುಳುವ ಮಹಾಸಭೆ, ತನ್ನ ಪುನಶ್ಚೇತನ ಚಟುವಟಿಕೆಯೊಳಗೆ 97ನೇ ವರ್ಷವನ್ನು ಆಚರಿಸುತ್ತಿದ್ದು, 1928ರಲ್ಲಿ ಆರಂಭಗೊಂಡ ಈ ಮಹಾಸಭೆ ಇನ್ನು ಮೂರು ವರ್ಷಗಳಲ್ಲಿ ಶತಮಾನೋತ್ಸವದ ಮಹತ್ವದ ಮೈಲಿಗಲ್ಲು ತಲುಪಲಿದೆ. ಈ ಹಿನ್ನಲೆಯಲ್ಲಿ ತಾಲೂಕು ಮಟ್ಟದಲ್ಲಿ ಶಕ್ತಿ ತುಂಬಿದ ನಾಯಕರನ್ನು ಆಯ್ಕೆ ಮಾಡಲಾಗುತ್ತಿದ್ದು, ಸುಳ್ಯ (Sullia) ತಾಲೂಕು ಘಟಕದ ಸಂಚಾಲಕರಾಗಿ ಮಿಲನ್ ಗೌಡ ಬಾಳಿಕಳ ಅವರನ್ನು ಆಯ್ಕೆ ಮಾಡಲಾಗಿದೆ.

ಸಮಾಜ ಶಾಸ್ತ್ರದಲ್ಲಿ ಪದವಿ ಮತ್ತು ಎಂ.ಎಸ್.ಡಬ್ಲ್ಯೂ. (MSW) ಪದವಿದಾರರಾದ ಮಿಲನ್ ಗೌಡ ಬಾಳಿಕಳ ಅವರು ಧಾರ್ಮಿಕ ಕ್ಷೇತ್ರ ಹಾಗೂ ಕ್ರೀಡಾ ಚಟುವಟಿಕೆಗಳ ಮೇಲೆ ವಿಶೇಷ ಆಸಕ್ತಿ ಹೊಂದಿದ್ದು, ತಮ್ಮ ಗ್ರಾಮೀಣ ಸಮುದಾಯದ ಒಳಗೊಂಡು ಸಾಂಸ್ಕೃತಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಅವರು ಬಾಳಿಕಳ ಬೂಡು ಶ್ರೀ ಪದ್ಮಾವತಿ ಮತ್ತು ಶ್ರೀ ಉಳ್ಳಾಕುಲು ಸೇವಾ ಸಮಿತಿ (ರಿ) ಇದರ ಪ್ರಮುಖ ಪದಾಧಿಕಾರಿಯಾಗಿ ಧಾರ್ಮಿಕ ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ.

ಇದೆ ವೇಳೆ ಅವರು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಸಂಸ್ಥೆಯ ಮಾರ್ಕೆಟಿಂಗ್ ಮತ್ತು ವ್ಯವಹಾರ ಅಭಿವೃದ್ಧಿ ವಿಭಾಗದ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಸ್ನೇಹಿ ಸೇವೆಗಳ ಮೂಲಕ ಸಮಾಜಿಕ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತಿದ್ದಾರೆ.

ಇದನ್ನೂ ಓದಿ: Bengaluru: ದ.ಕ. ಸಹಿತ ವಿವಿಧ ಜಿಲ್ಲೆಗಳಲ್ಲಿ ಪ್ಯಾಕೇಜ್ ಟೆಂಡರ್ ಅವಕಾಶ!

You may also like