Home » India book of record: ಕೊಡಗಿನ ಪುಟಾಣಿ ಮಾಶಿತಾಳಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವಾರ್ಡ್!

India book of record: ಕೊಡಗಿನ ಪುಟಾಣಿ ಮಾಶಿತಾಳಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವಾರ್ಡ್!

0 comments

India book of record: ಕೊಡಗಿನ ಪುಟಾಣಿ ಮಾಶಿತಾಳಿಗೆ ಒಂದು ವರ್ಷ ಹತ್ತು ತಿಂಗಳ ಪ್ರಾಯ. ಈಗಲೇ ತನ್ನಲ್ಲಿರುವ ಅಸಾಧಾರಣ ಬುದ್ದಿಮತ್ತೆಗಾಗಿ ಮತ್ತು ವಿಷಯವನ್ನು ಗ್ರಹಿಸುವ ವಿಶೇಷ ಸಾಮಾರ್ಥ್ಯಕಾಗಿ ವಿಶ್ವ ದಾಖಲೆ ಹಾಗೂ ಇಂಡಿಯಾ ಬುಕ್ ಆಫ್ ರೆಕೆರ್ಡ್ಸ್ ನಲ್ಲಿ (India book of record) ಸ್ಥಾನ ಪಡೆದಿದ್ದಾಳೆ.

ಚೆಟ್ಟಳ್ಳಿ ಸಮೀಪದ ಕಂಡಕರೆ ನಿವಾಸಿ ಕೆ.ಎಂ. ಮೊಯ್ದಿನ್ ಹಾಗೂ ಸಫ್ವಾನಾ ದಂಪತಿಯ ಪುತ್ರಿ ಮಾಶಿತಾ ತನ್ನ ಅಸಾಧಾರಣಾ ಸ್ಮರಣಶಕ್ತಿ ಮತ್ತು ಭಾಷಾ ಕೌಶಲ್ಯಕ್ಕಾಗಿ ವಿಶ್ವ ದಾಖಲೆಯೊಂದಿಗೆ

ಇಂಡಿಯಾ ಬುಕ್ ಆಫ್ ರೆಕೆರ್ಡ್ಸ್ ನಲ್ಲಿ ಮನ್ನಣೆ ಗಳಿಸಿರುವ ಮಗು ಆಗಿದೆ.

ಇಂಗ್ಲಿಷ್ ವರ್ಣಮಾಲೆಗಳು (A -Z), ಅರೇಬಿಕ್ ವರ್ಣಮಾಲೆಗಳು ಹಾಗೂ ಈ ಎರಡೂ ಭಾಷೆಗಳ ಸಂಖ್ಯೆಗಳು, ಹಣ್ಣು, ತರಕಾರಿ, ವಾಹನ ಮತ್ತು ವಿವಿಧ ದೇಶಗಳ ರಾಷ್ಟ್ರಧ್ವಜಗಳ ಹೆಸರುಗಳನ್ನು ಗುರುತಿಸುವುದು ಹಾಗೂ ಅರೇಬಿಕ್ ಭಾಷೆಯ ಸಣ್ಣ ಕವಿತೆಗಳು ಜನಪ್ರಿಯ ಮಕ್ಕಳ ಇಂಗ್ಲಿಷ್ ಹಾಡುಗಳು, ದೈನಂದಿನ ಇಸ್ಲಾಮಿಕ್ ಧಿಕ್ರ್ ಹಾಗೂ ದುವಾ ಮೂಲಕ ಈ ಸಾಧನೆ ಮಾಡಿದೆ. ಬಹುಭಾಷೆಗಳಲ್ಲಿ ವಿಷಯವನ್ನು ಪ್ರತ್ಯೇಕಿಸುವ ಮತ್ತು ಪಠಿಸುವ ಮಾಶಿತಾಳ ಸಾಮರ್ಥ್ಯವು ಅಸಾಧಾರಣಾ ಸಾಧನೆ ಎನಿಸಿದೆ.

ಆನ್ ಲೈನ್ ನಲ್ಲಿ ಮಗುವಿನ ಅಸಾಧಾರಣಾ ಗ್ರಹಿಸುವ ಮತ್ತು ಪಠಿಸುವ ಲೈವ್ ವಿಡಿಯೋ ಮೂಲಕ I.B.R. ACHEIVER ಶೀರ್ಷಿಕೆಯ ಇಂಡಿಯಾ ಬುಕ್ ಆಫ್ ರೆಕೆರ್ಡ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಅಲ್ಲದೇ ವೈಯಕ್ತಿಕ ವಿಭಾಗದಲ್ಲಿ ವಿಶೇಷ ಪ್ರತಿಭೆಯ ಅಸಾಧಾರಣಾ ಗ್ರಹಿಸುವ ಶಕ್ತಿಯ ಪ್ರತಿಭಾನ್ವಿತ ಮಗು ಎಂಬ ಶೀರ್ಷಿಕೆಯ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದಿದೆ. ಸೆಪ್ಟೆಂಬರ್ 27 ರಂದು ಚೆನ್ನೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಶಿತಾ ಪೋಷಕರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾಳೆ.

ಇದನ್ನೂ ಓದಿ;Political: ರಮೇಶ್ ಜಾರಕಿಹೊಳಿ ಸಿಡಿ ರಿಲೀಸ್ ಮಾಡಿಸಿದ್ದೆ ವಿಜಯೇಂದ್ರ, ಡಿಕೆಶಿ ಜೊತೆ ಸೇರಿ ನಡೆಯಿತೇ ಪಕ್ಕ ಪ್ಲಾನ್?

You may also like