Home » Puttur: ಹೆಬ್ಬಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿಗಳನ್ನು ರಕ್ಷಿಸಿದ ಪುತ್ತೂರಿನ ಸ್ನೇಕ್ ತೇಜಸ್!

Puttur: ಹೆಬ್ಬಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿಗಳನ್ನು ರಕ್ಷಿಸಿದ ಪುತ್ತೂರಿನ ಸ್ನೇಕ್ ತೇಜಸ್!

0 comments

Puttur: ಸುಳ್ಯದ ಮುಂಡೆಕೋಲು ಹರೀಶ್ಚಂದ್ರ ಗೌಡ ಅವರ ಮನೆಯಲ್ಲಿ ದೊರೆತ 14 ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡಿ ಕೃತಕ ಕಾವು ನೀಡಿ 14 ಮರಿಗಳು ಸುರಕ್ಷಿತವಾಗಿ ಹೊರ ಬಂದಿದೆ. ಹೊರಬಂದ 14 ಮರಿಗಳನ್ನೂ ಅರಣ್ಯ ಇಲಾಖೆಯ ಸಮಿತಿಯೊಂದಿಗೆ ಉರಗ ಪ್ರೇಮಿ ಪುತ್ತೂರು (Puttur) ಬನ್ನೂರು ನಿವಾಸಿ ಸ್ನೇಕ್ ತೇಜಸ್‌ ಅವರು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ಅದಕ್ಕೆ 35 ದಿನದಿಂದ ಕೃತಕ ಕಾವು ನೀಡಿ 14 ಮರಿಗಳು ಸುರಕ್ಷಿತವಾಗಿ ಹೊರಬಂದಿವೆ. ಹೊರಬಂದ ಈ ಮರಿಗಳನ್ನು ಅರಣ್ಯ ಇಲಾಖೆಯ ಸಮಿತಿಯೊಂದಿಗೆ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ. ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಮಂಜುನಾಥ್, ಉಪ ವಲಯ ಅರಣ್ಯ ಅಧಿಕಾರಿ ಸಂದೀಪ್, ಬೀಟ್ ಫಾರೆಸ್ಟರ್ ದೀಪಕ್ ಮತ್ತು ಪ್ರತಾಪ್‌ ಚೌಡಪ್ಪನವ‌ರ್, ಅರಣ್ಯ ವೀಕ್ಷಕ ಶ್ರೀಧ‌ರ್ ಮೈಲಪ್ಪ ಜೊತೆಗಿದ್ದರು.

ಇದನ್ನೂ ಓದಿ:Bengaluru: ಜುಲೈ 1 ರಿಂದ ರಾಜ್ಯಾದ್ಯಂತ ಹೊಸ, ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ!

You may also like