Home » Bike Taxi: ಬೈಕ್ ಟಾಕ್ಸಿ ನಿಷೇಧ: ರದ್ದು ವಾಪಸ್ಸು ಪಡೆಯುವಂತೆ ಉಪವಾಸ ಸತ್ಯಾಗ್ರಹ

Bike Taxi: ಬೈಕ್ ಟಾಕ್ಸಿ ನಿಷೇಧ: ರದ್ದು ವಾಪಸ್ಸು ಪಡೆಯುವಂತೆ ಉಪವಾಸ ಸತ್ಯಾಗ್ರಹ

0 comments

Bike Taxi: ಬೈಕ್ ಟ್ಯಾಕ್ಸಿಗಳ ಮೇಲೆ ಸರ್ಕಾರ ನಿಷೇಧವನ್ನು ಈಗಾಗಲೇ ಹೇಳಿದ್ದು, ಇದನ್ನು ರದ್ದುಪಡಿಸಲು ಒತ್ತಾಯಿಸಿ ಕರ್ನಾಟಕ ಬೈಕ್ ಟ್ಯಾಕ್ಸಿಯವರು ಬೆಂಗಳೂರು, ಮೈಸೂರು, ಮಂಡ್ಯ ಮತ್ತು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ

ತಮ್ಮ ಮಕ್ಕಳ ಶಾಲೆಯ ಫೀಸ್ ತುಂಬಲು ಹಾಗೂ ನಮ್ಮ ಪೋಷಕರನ್ನ ನೋಡಿಕೊಳ್ಳಲು ಮತ್ತು ಬಡತನದಿಂದ ಹೊರಗೆ ಬರಲು ಬೈಕ್ ಟ್ಯಾಕ್ಸಿ ತುಂಬಾ ಅನಿವಾರ್ಯ, ನಾವು ಈ ಕೆಲಸದ ಮೇಲೆ ಅವಲಂಬಿತರಾಗಿದ್ದೆವು ಎಂದು ಹೇಳಿಕೊಂಡಿದ್ದಾರೆ.

ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಆಹಾರ ಮತ್ತು ಪಾರ್ಸೆಲ್ ವಿತರಣೆಗೆ ಅನುಮತಿ ನೀಡಲಾಗಿದ್ದರೂ, ಪ್ರಯಾಣಿಕರನ್ನು ಸಾಗಿಸಲು ಬಳಸುವ ಅದೇ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ ಹಾಗೂ ನಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕೆಂದು ಬಯಸುತ್ತೇವೆ. ನಾವು ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಉಪವಾಸ ಸತ್ಯಾಗ್ರಹದ ಜೊತೆಗೆ, ಸವಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪತ್ರಗಳನ್ನು ಸಲ್ಲಿಸಿದ್ದು, ನ್ಯಾಯಯುತ ಮತ್ತು ಸಮಗ್ರ ನೀತಿಯನ್ನು ರೂಪಿಸುವಲ್ಲಿ ಪಾಲುದಾರರನ್ನು ಒಳಗೊಳ್ಳುವಂತೆ ಒತ್ತಾಯಿಸಿದ್ದಾರೆ.

You may also like