Home » Shree shailam: ಶ್ರೀಶೈಲಂ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಜಿರಳೆ: ಭಕ್ತರೊಬ್ಬರು ಮಾಡಿದ ವಿಡಿಯೋ ವೈರಲ್

Shree shailam: ಶ್ರೀಶೈಲಂ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಜಿರಳೆ: ಭಕ್ತರೊಬ್ಬರು ಮಾಡಿದ ವಿಡಿಯೋ ವೈರಲ್

0 comments

Shree shailam: ಆಂಧ್ರಪ್ರದೇಶದಲ್ಲಿರುವ ಪ್ರಸಿದ್ಧ ದೇವಾಲಯ ಶ್ರೀಶೈಲಂನ ಲಡ್ಡು ಪ್ರಸಾದಲ್ಲಿ ಜಿರಳೆ ಕಂಡು ಬಂದಿರುವ ಘಟನೆ ನಡೆದಿದೆ.

ಭಕ್ತರೊಬ್ಬರು ಜಿರಳೆ ಕಂಡು ಬಂದಿದೆ ಎಂದು ಆರೋಪ ಮಾಡಿದ್ದು, ಕೆ ಶರತ್ಚಂದ್ರ ಎಂಬ ಭಕ್ತ ಲಡ್ಡು ಮಧ್ಯ ಭಾಗದಲ್ಲಿ ಜಿರಳೆ ಇರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ ಇವರ ಆರೋಪಗಳನ್ನು ದೇವಾಲಯದ ಆಡಳಿತ ಮಂಡಳಿ ನಿರಾಕರಿಸಿದೆ.

ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಶ್ರೀನಿವಾಸ್ ರಾವ್ ಸ್ವಚ್ಛತೆಯನ್ನ ಕಾಪಾಡುವ ಮೂಲಕವೇ ಲಡ್ಡು ತಯಾರು ಮಾಡಲಾಗುತ್ತದೆ ಭಕ್ತರು ಚಿಂತೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

You may also like