Home » Patna: ಏಕಾಏಕಿ ನೀರಿನ ಹರಿವು ಹೆಚ್ಚಳ, ಕೊಚ್ಚಿ ಹೋದ ಯುವತಿಯರು, ಸ್ಥಳೀಯರಿಂದ ರಕ್ಷಣೆ, ವಿಡಿಯೋ ವೈರಲ್ ‌

Patna: ಏಕಾಏಕಿ ನೀರಿನ ಹರಿವು ಹೆಚ್ಚಳ, ಕೊಚ್ಚಿ ಹೋದ ಯುವತಿಯರು, ಸ್ಥಳೀಯರಿಂದ ರಕ್ಷಣೆ, ವಿಡಿಯೋ ವೈರಲ್ ‌

by Mallika
0 comments

Patna: ಜಲಪಾತ ವೀಕ್ಷಣೆ ಮಾಡಲೆಂದು ಹೋಗಿದ್ದ 6 ಯುವತಿಯರು ಏಕಾಏಕಿ ನೀರು ಹೆಚ್ಚಾಗಿ ಕೊಚ್ಚಿ ಹೋದ ಘಟನೆ ನಡೆದಿದೆ. ಈ ಕುರಿತು ವೀಡಿಯೋ ವೈರಲ್‌ ಆಗಿದೆ. ಬಿಹಾರದ ಗಯಾ ಜಿಲ್ಲೆಯಲ್ಲಿರುವ ಲಂಗುರಿಯಾ ಬೆಟ್ಟದ ಜಲಪಾತದ ಬಳಿ ಈ ಘಟನೆ ನಡೆದಿದೆ. ಇದೊಂದು ಪ್ರವಾಸಿ ತಾಣವಾಗಿದ್ದು, ಜಲಪಾತ ವೀಕ್ಷಣೆ ಮಾಡಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಜಲಪಾತದ ಮೇಲ್ಭಾಗದಲ್ಲಿ ನೀರಿಗಿಳಿದು ಯುವತಿಯರು ಆಟವಾಡಲು ಶುರು ಮಾಡಿದ್ದಾರೆ. ಏಕಾಏಕಿ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಒಂದೇ ಭಾರೀ ಪ್ರವಾಹ ಪರಿಸ್ಥಿತಿ ನಿರ್ಮಾಣ ಉಂಟಾಗಿ ನೀರಿನ ಹರಿವು ಹೆಚ್ಚಾಗಿದೆ.

ನೀರು ಹೆಚ್ಚಾದ ಕಾರಣದ ಯುವತಿಯರು ದಡ ಸೇರಲು ಆಗಿಲ್ಲ. ಓರ್ವ ಯುವತಿ ಕಲ್ಲಿನಿಂದ ಕಲ್ಲಿಗೆ ಹಾರಿದ್ದಾಳೆ. ಸ್ಥಳೀಯರು ಆಕೆಯನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಇದೇ ಇತರ ಮೂವರು ಯುವತಿಯರು ಕಲ್ಲಿನಿಂದ ಜಿಗಿಯಲು ಪ್ರಯತ್ನ ಮಾಡಿದ್ದು, ಸಾಧ್ಯವಾಗದೇ ಕೊಚ್ಚಿ ಹೋಗಿದ್ದಾರೆ. ಜಲಪಾತ ಪ್ರಪಾತಕ್ಕೆ ಧುಮಕಲಿದೆ ಎನ್ನುವ ಸಂದರ್ಭದಲ್ಲಿ ಸ್ತಳೀಯರು ಈ ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:Madenuru Manu: ಮಡೆನೂರು ಮನುಗೆ ಚಿತ್ರರಂಗ ಹೇರಿದ್ದ ಬ್ಯಾನ್‌ ತೆರವು

You may also like