Home » Hukkeri Police Station: ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ: ಗೋ ಕಳ್ಳರ ಬಳಿ ಲಂಚ ಪಡೆದ ಆರೋಪ: ಪಿಎಸ್‌ಐ ಅಮಾನತು

Hukkeri Police Station: ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ: ಗೋ ಕಳ್ಳರ ಬಳಿ ಲಂಚ ಪಡೆದ ಆರೋಪ: ಪಿಎಸ್‌ಐ ಅಮಾನತು

by V R
0 comments

Hukkeri Police Station: ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಕ್ಕೇರಿ ಪೊಲೀಸ್‌ ಠಾಣೆ ಪಿಎಸ್‌ಐ ನಿಖಿಲ್‌ ಕಾಂಬ್ಳೆ ಅವರನ್ನು ಅಮಾನತು ಮಾಡಲಾಗಿದೆ.

ಶ್ರೀರಾಮ ಸೇನೆ ಕಾರ್ಯಕರ್ತರು ಜೂನ್‌ 26 ರಂದು ಗೋವು ಸಮೇತ ಠಾಣೆಗೆ ಹೋಗಿದ್ದರು. ಆದರೆ ಎಫ್‌ಐಆರ್‌ ಹಾಕದೇ ನಿರ್ಲಕ್ಷ್ಯ ತೋರಿಸಿದ್ದಕ್ಕೆ ಎಸ್‌ಪಿ ಭೀಮಾಶಂಕರ್‌ ಗುಳೇದ್‌ ಅವರನ್ನು ಅಮಾನತು ಆದೇಶ ಮಾಡಿದ್ದಾರೆ.

ಘಟನೆಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರದೇ ಇರುವುದು, ಗಡಿಪಾರಾದ ರೌಡಿಶೀಟರ್‌ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್‌ ಸೊಲ್ಲಾಪುರೆಯನ್ನು ಬಿಟ್ಟು ಕಳುಹಿಸಿದ ಅಂಶ ಪರಿಗಣಿಸಿ ಅಮಾನತು ಮಾಡಲಾಗಿದೆ.

ಜುಲೈ 3 ರಂದು ಇಂಗಳಿ ಚಲೋ ಕರೆ ಕೊಟ್ಟಿರುವ ಶ್ರೀರಾಮ ಸೇನೆ ಸಂಘಟನೆ ಪ್ರತಿಭಟನೆಗೂ ಮೊದಲೇ ಪಿಎಸ್‌ಐ ಅವರನ್ನು ಅಮಾನತು ಮಾಡಿ ಬೆಳಗಾವಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Father Sentenced to jail: ಅಪ್ರಾಪ್ತ ಮಗನಿಗೆ ಬೈಕ್‌ ಕೊಟ್ಟ ತಂದೆಗೆ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡ

You may also like