Home » Bappanadu Temple: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಬಸವ ಕೃಷ್ಣ ಇನ್ನಿಲ್ಲ

Bappanadu Temple: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಬಸವ ಕೃಷ್ಣ ಇನ್ನಿಲ್ಲ

by V R
0 comments

Bappanadu Temple: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸವ ಅಲ್ಪ ಕಾಲದ ಅಸೌಖ್ಯದ ನಂತರ ಮಂಗಳೂರಿನ ಪಶು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.

ದೇವಸ್ಥಾನದಲ್ಲಿ ಕಳೆದ 12 ವರ್ಷಗಳಿಂದ ಕ್ಷೇತ್ರದ ದಿಡುಂಬನಾಗಿ ಬಸವ ಸೇವೆ ಸಲ್ಲಿಸುತ್ತಿದ್ದ. ಭಕ್ತರೊಬ್ಬರು ಬಸವನಿಗೆ 6 ವರ್ಷ ಪ್ರಾಯ ಇದ್ದಾಗ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದರು. ಇದಕ್ಕೆ ಕೃಷ್ಣ ಎಂದು ಹೆಸರಿಡಲಾಗಿತ್ತು. ಎಂಟು ದಿನಗಳ ಹಿಂದೆ ಮಂಗಳೂರಿನ ಪಶುವೈದ್ಯಾಲಯಕ್ಕೆ ದಾಖಲು ಮಾಡಿದ್ದು, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ನಡೆಸಲಾಗಿತ್ತು. ಆರೋಗ್ಯ ಮೊದ ಮೊದಲಿಗೆ ಸುಧಾರಣೆ ಕಂಡರೂ ಮಂಗಳವಾರ ಮೃತಪಟ್ಟಿದೆ.

ದೇವಸ್ಥಾನದ ಆಡಳಿತ ಹಾಗೂ ವೈದಿಕ ವೃಂದದ ಮೂಲಕ ಭಕ್ತರು ಸೇರಿ ಸಾಂಪ್ರದಾಯಿಕ ಅಂತಿಮ ವಿಧಾನಗಳು ಕ್ಷೇತ್ರದ ಎದುರಿನ ಗದ್ದೆಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ಇದನ್ನೂ ಓದಿ: Heart Attack: ಶವ ನೋಡುವಾಗ ಮಹಿಳೆ ಹಾರ್ಟ್‌ ಅಟ್ಯಾಕ್‌, ಸಾವು

You may also like