Home » Mumbai: ‘ಮಗನ ವೀರ್ಯವನ್ನು ನನಗೆ ನೀಡಿ’ – ಹೈ ಕೋರ್ಟ್ ಮೊರೆ ಹೋದ ತಾಯಿ, ಕೋರ್ಟ್ ಹೇಳಿದ್ದೇನು?

Mumbai: ‘ಮಗನ ವೀರ್ಯವನ್ನು ನನಗೆ ನೀಡಿ’ – ಹೈ ಕೋರ್ಟ್ ಮೊರೆ ಹೋದ ತಾಯಿ, ಕೋರ್ಟ್ ಹೇಳಿದ್ದೇನು?

by V R
0 comments

Mumbai: ಅಸಹಾಯಕ ತಾಯಿಯೊಬ್ಬರು ತನ್ನ ಮಗನ ವೀರ್ಯಕ್ಕಾಗಿ ನ್ಯಾಯಾಲಯದ ಮೊರೆ ಹೋದಂತಹ ವಿಚಿತ್ರ ಪ್ರಕರಣ ಒಂದು ಮುಂಬೈ ಹೈಕೋರ್ಟಿನಲ್ಲಿ ದಾಖಲಾಗಿದೆ.

ಹೌದು, ಅರ್ಜಿದಾರರ ಮಗನಿಗೆ ಕ್ಯಾನ್ಸರ್ ಇತ್ತು. ಮಗ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾಗ ಸಾವನ್ನಪ್ಪಿದ್ದ. ಆತ ತನ್ನ ವೀರ್ಯವನ್ನು ಫ್ರೀಜ್ ಮಾಡಿ ವೀರ್ಯದ ಬ್ಯಾಂಕಿನಲ್ಲಿ ಇಟ್ಟಿದ್ದ. ಆದರೆ ಮಗನ ಮರಣದ ನಂತರ ಫಲವತ್ತತೆ ಕೇಂದ್ರವು ಆತನ ತಾಯಿಗೆ ವೀರ್ಯವನ್ನು ನೀಡಲು ನಿರಾಕರಿಸಿತ್ತು. ಆದ್ದರಿಂದ ಇದೀಗ ದುರದೃಷ್ಟಕರ ಮಗನ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈಗ ಪ್ರಕರಣದ ತೀರ್ಪು ಬರುವವರೆಗೂ ಮೃತ ಯುವಕನ ಹೆಪ್ಪುಗಟ್ಟಿದ ವೀರ್ಯವನ್ನು ಸುರಕ್ಷಿತವಾಗಿಡಲು ಬಾಂಬೆ ಹೈಕೋರ್ಟ್ ಫಲವತ್ತತೆ ಕೇಂದ್ರಕ್ಕೆ ಆದೇಶಿಸಿದೆ.

ತನ್ನ ಮಗನಿಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಆಂಕೊಲಾಜಿಸ್ಟ್ ಒಬ್ಬರು ಕೀಮೋಥೆರಪಿ ಬಂಜೆತನಕ್ಕೆ ಕಾರಣವಾಗಬಹುದು ಅನ್ನೋ ಕಾರಣಕ್ಕೆ ಆತನ ವೀರ್ಯವನ್ನು ಫ್ರೀಜ್ ಮಾಡಲು ಸಲಹೆ ನೀಡಿದ್ದಾರೆಂದು ಮಹಿಳೆ ಕೋರ್ಟ್‌ಗೆ ತಿಳಿಸಿದ್ದಾರೆ. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆ ಪೂರ್ಣಗೊಳ್ಳುವ ಮೊದಲು ಯುವಕನ ವೀರ್ಯ ಹಾನಿಗೊಳಗಾದರೆ ಅಥವಾ ನಾಶವಾದರೆ, ಅರ್ಜಿಯ ಉದ್ದೇಶವೇ ವಿಫಲಗೊಳ್ಳುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದ್ದರಿಂದ ಅರ್ಜಿ ಇತ್ಯರ್ಥವಾಗುವವರೆಗೆ ಯುವಕನ ವೀರ್ಯವನ್ನು ಇಡುವಂತೆ ನ್ಯಾಯಾಲಯವು ಫಲವತ್ತತೆ ಕೇಂದ್ರಕ್ಕೆ ಆದೇಶಿಸಿದ್ದಾರೆ.

ಇದನ್ನೂ ಓದಿ: Karnataka Gvt: IAS ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸಿದ ರಾಜ್ಯ ಸರ್ಕಾರ – ರೋಹಿಣಿ ಸಿಂಧೂರಿ ಹೆಗಲಿಗೆ ಉಡುಪಿ ಜಿಲ್ಲೆ

You may also like