Heart Attack: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸಾವಿನ ಸರಣಿ ಮುಂದುವರಿದಿದೆ. ನಿನ್ನೆ ಸಾವನ್ನಪ್ಪಿದ್ದ ಪ್ರಕರಣ ಇಂದು ಬೆಳಕಿಗೆ ಬಂದಿದೆ. ನಿನ್ನೆ ಒಂದೇ ದಿನ ಮೂವರು ಸಾವನ್ನಪ್ಪಿದ್ದಾರೆ.
ಹೃದಯಾಘಾತದಿಂದ ನಿನ್ನೆ ಸಂಪತ್‌ಕುಮಾರ್ (53) ಎಂಬ ವ್ಯಕ್ತಿ ಸಾವನ್ನಪ್ಪಿದ ಬೆನ್ನಲ್ಲೇ ಸಿ.ಬಿ.ವಿರೂಪಾಕ್ಷ (70) ವ್ಯಕ್ತಿ ಮೃತಪಟ್ಟಿದ್ದಾರೆ. ಅಲ್ಲದೆ ಗ್ರಾ.ಪಂ. ಸದಸ್ಯ ಸಂತೋಷ್ (41) ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇವರಲ್ಲದೆ ಹಾಸನದ ಎಂಜಿನಿಯರ್ ಮೈಸೂರಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ವಿಜಯನಗರ ಜಿಮ್ ನಲ್ಲಿ ಐದು ದಿನಗಳ ಹಿಂದೆ ವ್ಯಾಯಾಮ ಮಾಡುವಾಗ ಜಿಮ್ ನಲ್ಲಿ ಥ್ರೆಡ್ ಮಿಲ್ ಮಾಡುವಾಗಲೇ ಕುಸಿದು ಬಿದ್ದದ್ದ ಗೋಕುಲಂ ನಿವಾಸಿ ಬಿ.ಎನ್.ಶ್ರೀಧರ್ (51) ಮೈಸೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ರು.ಮೂಲತಃ ಹೊಳೆನರಸೀಪುರ ತಾಲೂಕು ಜುಂಜನಹಳ್ಳಿ ಗ್ರಾಮದ ಶ್ರೀಧರ್, ನಾಗರತ್ನಮ್ಮ ಹಾಗು ನಿಂಗೇಗೌಡ ಅವರ ಮಗ ಎಂದು ಹೇಳಲಾಗುತ್ತಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ವಿರೂಪಾಕ್ಷ ಅವರಿಗೆ ಕಳೆದ ರಾತ್ರಿ 11:30 ರ ಸುಮಾರಿನಲ್ಲಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಿ.ಬಿ.ವಿರೂಪಾಕ್ಷ ಕೊನೆಯುಸಿರೆಳೆದಿದ್ದಾರೆ.
ಇನ್ನು ಆಲೂರು ತಾಲ್ಲೂಕಿನ, ಕಲ್ಲಾರೆ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ, ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಬೆಳಿಗ್ಗೆ ಎಷ್ಟೊತ್ತಾದರೂ ಎದ್ದಳದೇ ಇದ್ದಾಗ ಕುಟುಂಬಸ್ಥರು ನೋಡಿ, ಕೂಡಲೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಹೃದಯಾಘಾತದಿಂದ ಸಂತೋಷ್ ಸಾವನ್ನಪ್ಪಿದ್ದರು. ಹಾಸನ ಜಿಲ್ಲೆಯಲ್ಲಿ ಒಂದುವರೆ ತಿಂಗಳಿನಲ್ಲಿ ಹೃದಯಾಘಾತಕ್ಕೆ 30 ಮಂದಿ ಸಾವನ್ನಪ್ಪಿದ್ದು, ಇದರ ಹಿಂದಿನ ಕಾರಣ ಈಗ ಯಕ್ಷ ಪ್ರಶ್ನೆಯಾಗೇ ಉಳಿದಿದೆ.
ಇದನ್ನೂ ಓದಿ: Modi: ಪ್ರಧಾನಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
