Home » Heart Attack: ಹಾಸನದಲ್ಲಿ ನಿಲ್ಲದ ಹೃದಯಾಘಾತ: ಮತ್ತೋರ್ವ ಮಹಿಳೆ ಸಾವು

Heart Attack: ಹಾಸನದಲ್ಲಿ ನಿಲ್ಲದ ಹೃದಯಾಘಾತ: ಮತ್ತೋರ್ವ ಮಹಿಳೆ ಸಾವು

0 comments

Heart Attack: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸರಣಿ ಸಾವು ಮುಂದುವರಿದಿದೆ. ಇಂದು ಹೃದಯಾಘಾತದಿಂದ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಬಿ.ಎನ್.ವಿಮಲಾ (55) ಹೃದಯಾಘಾತದಿಂದ ಮೃತಪಟ್ಟ ಗೃಹಿಣಿ. ಹಾಸನ ನಗರದ ದಾಸರಕೊಪ್ಪಲಿನಲ್ಲಿ ಘಟನೆ ನಡೆದಿದ್ದು, ಸಕಲೇಶಪುರ ತೋಟದಗದ್ದೆ ಕುಮಾರ್ ಎಂಬುವವರ ಧರ್ಮಪತ್ನಿ ಬಿ.ಎನ್.ವಿಮಲಾ ಹಾಸನದ ದಾಸರಕೊಪ್ಪಲಿನಲ್ಲಿ ಕುಟುಂಬ ವಾಸವಿದ್ದರು.

 

ಮಹಿಳೆ ನಿನ್ನೆ ರಾತ್ರಿ ಮನೆಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಹಾಸನದಲ್ಲಿ ಕಳೆದ ಒಂದುವರೆ ತಿಂಗಳಿನಲ್ಲಿ 35 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಹೃದಯಾಘಾತ ಪ್ರಕರಣಗಳಿಂದ ಜಿಲ್ಲೆಯ ಜನರಲ್ಲಿ ದಿನೇದಿನೇ ಆತಂಕ ಹೇಚ್ಚಾಗುತ್ತಿದೆ.

You may also like