4
Belthangady: ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ಕೆರಿ ಯಲ್ಲಿ ನಡೆದಿದೆ. ಮೃತ ಯುವಕನನ್ನು ಸುಲ್ಕೆರಿ ಗ್ರಾಮದ ಮುಡಿಪಿರೆ ನಿವಾಸಿ ಕಿಶೋರ್ (25) ಎಂದು ಗುರುತಿಸಲಾಗಿದೆ.
ಕಿಶೋರ್ ಅವರು ಗಾರೆ ಕೆಲಸ, ಮದ್ದು ಸಿಂಪಡಿಸುವ ಕೆಲಸ ಮಾಡಿಕೊಂಡಿದ್ದರೆನ್ನಲಾಗಿದೆ. ಕಳೆದ ಒಂದು ವಾರದಿಂದ ಯಾರಲ್ಲಿಯೂ ಹೆಚ್ಚು ಬೆರೆಯುತ್ತಿರಲಿಲ್ಲ. ನಿನ್ನೆ ಮಧ್ಯಾಹ್ನದಿಂದ ಅವರು ನಾಪತ್ತೆಯಾಗಿದ್ದು, ಸಂಜೆಯವರೆಗೆ ಮನೆಗೆ ಬಾರದೆ ಇದ್ದಾಗ ಸ್ಥಳಿಯರು ಸೇರಿ ಹುಡುಕಲು ಪ್ರಾರಂಭಿಸಿದಾಗ ರಾತ್ರಿ ಸುಮಾರು 11 ಗಂಟೆಗೆ ನೇಣು ಬಿಗಿದುಕೊಂಡ ರೀತಿಯಲ್ಲಿ ಕಿಶೋರ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಸ್ಥಳಕ್ಕೆ ವೇಣೂರು ಪೋಲಿಸರು ಆಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
