BJP Leader Shootout: ಬಿಜೆಪಿ ನಾಯಕ ಹಾಗೂ ಹೆಸರಾಂತ ಉದ್ಯಮಿ ಗೋಪಾಲ್ ಖೇಮ್ಕಾ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ಮಾಡಿರುವ ಘಟನೆ ನಡೆದಿದೆ. ಬಿಹಾರದ ಹೆಸರಾಂತ ಉದ್ಯಮಿಯಾಗಿರುವ ಗೋಪಾಲ್ ಖೇಮ್ಕಾ ತಮ್ಮ ಮನೆಗೆ ವಾಪಸು ಬರುತ್ತಿರುವ ಸಂದರ್ಭದಲ್ಲಿ ಆರೋಪಿಗಳು ಅವರ ಮೇಲೆ ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದಾರೆ.
ಬುಲೆಟ್ ತಗುಲಿದ್ದರಿಂದ ಗೋಪಾಲ್ ಖೇಮ್ಕಾ ಅವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಪನಾಚೆ ಹೋಟೆಲ್ ಪಕ್ಕದಲ್ಲಿರುವ ಟ್ವಿನ್ ಟವರ್ ಸೊಸೈಟಿಯಲ್ಲಿ ಗೋಪಾಲ್ ಖೇಮ್ಕಾ ಮನೆ ಇದೆ. ಮನೆಗೆ ಹೋಗಬೇಕಾದರೆ ಗುಂಡಿನ ದಾಳಿ ಆಗಿದೆ.
ಪಾಟ್ನಾದ ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಪನಾಚೆ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗೋಪಾಲ್ ಖೇಮ್ಕಾ ಅವರಿಗೆ ತಗುಲಿದ್ದ ಬುಲೆಟ್, ಶೆಲ್ ಕವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜುಲೈ 4 ರ ರಾತ್ರಿ 11 ಗಂಟೆ ಸುಮಾರಿಗೆ ಮಾಹಿತಿ ತಿಳಿದಿದ್ದು, ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಲಾಗುತ್ತಿರುವುದಾಗಿ ನಗರದ ಎಸ್‌ಪಿ ದಿಕ್ಷಾ ಅವರು ಹೇಳಿದ್ದಾರೆ.
ಗೋಪಾಲ್ ಖೇಮ್ಕಾ ಕುಟುಂಬದ ಮೇಲೆ ದಾಳಿ ಮಾಡಿರುವುದು ಇದೇ ಮೊದಲನೇ ಬಾರಿ ಅಲ್ಲ. ಈ ಹಿಂದೆ 2018 ಡಿಸೆಂಬರ್ 20 ರಂದು ಗೋಪಾಲ್ ಖೇಮ್ಕಾ ಅವರ ಮಗ ಗುಂಜನ್ ಖೇಮ್ಕಾ ಮೇಲೆ ಹಾಜಿಪುರ ಕೈಗಾರಿಕಾ ಪ್ರದೇಶದಲ್ಲಿ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿತ್ತು. ಇದೀಗ ತಂದೆಯನ್ನು ಕೂಡಾ ಸಾಯಿಸಲಾಗಿದೆ.
ಇದನ್ನೂ ಓದಿ: Death: ವಿದ್ಯುತ್ ಶಾಕ್ ಹೊಡೆದು ಯುವಕ ಬಲಿ!
