Yash dayal : ಐಪಿಎಲ್ 2025 ರಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ಆಗಿದ್ದ ಯಶ್ ದಯಾಳ್ (Yash dayal) ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಇದೀಗ ಯಶ್ ದಯಾಳ್ ಕ್ರಿಕೆಟರ್ ವಿರುದ್ಧ FIR ದಾಖಲಾಗಿದೆ.
ಯಶ್ ದಯಾಳ್ ವಿರುದ್ಧ ಗಾಜಿಯಾಬಾದ್‌ನ ಯುವತಿಯೊಬ್ಬಳು ದೂರು ದಾಖಲಿಸಿದ್ದು, ಮದುವೆಯ ಭರವಸೆ ನೀಡಿ ಆರ್ಥಿಕ ಮತ್ತು ಮಾನಸಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಕಳೆದ 5 ವರ್ಷಗಳಿಂದ ಯಶ್ ದಯಾಳ್ ಜೊತೆ ಸಂಬಂಧ ಹೊಂದಿದ್ದಾಗಿ ಸಂತ್ರಸ್ತ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಈ ಹಿನ್ನಲೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯುವತಿಯ ಆರೋಪಗಳು ನಿಜವೆಂದು ಸಾಬೀತಾದರೆ ಯಶ್ ದಯಾಳ್ ಜೈಲು ಪಾಲಾಗಲಿದ್ದು, ಇದರಿಂದ ಅವರ ವೃತ್ತಿಜೀವನವು ಅಂತ್ಯವಾಗುವ ಆತಂಕ ಎದುರಾಗಿದೆ. ಶೀಘ್ರದಲ್ಲಿ ಯಶ್ ದಯಾಳ್ ರನ್ನು ವಿಚಾರಣೆಗೆ ಒಳಪಡಿಸೋ ಸಾಧ್ಯತೆ ಇದೆ.
ಇದನ್ನೂ ಓದಿ: Puttur: ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ: ಆರೋಪಿಗೆ ನಿರೀಕ್ಷಣಾ ಜಾಮೀನು
