Home » Shivamogga: ಕೆಲಸ ಮಾಡುವ ಸಂದರ್ಭದಲ್ಲಿ ತಲೆ ಮೇಲೆ ಬಿದ್ದ ಮರದ ದಿಮ್ಮಿ: ವ್ಯಕ್ತಿ ಸಾವು

Shivamogga: ಕೆಲಸ ಮಾಡುವ ಸಂದರ್ಭದಲ್ಲಿ ತಲೆ ಮೇಲೆ ಬಿದ್ದ ಮರದ ದಿಮ್ಮಿ: ವ್ಯಕ್ತಿ ಸಾವು

by Mallika
0 comments

Thirthahalli: ಟಿಂಬರ್‌ ಲೋಡ್‌ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಕಾರಣ ಮರದ ದಿಮ್ಮಿ ಮೈಮೇಲೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಬಸವಾನಿಯಲ್ಲಿ ಜು.8 (ಇಂದು) ನಡೆದಿದೆ.

ಯೋಗೇಂದ್ರ (52) ಮೃತಪಟ್ಟ ವ್ಯಕ್ತಿ.

ಯೋಗೇಂದ್ರ ಅವರು ಸೇರಿ ನಾಲ್ವರು ಟಿಂಬರ್‌ ಲೋಡ್‌ ಮಾಡಲು ಹೇಳಿದ್ದ ಕಾರಣ ಬಸವಾನಿ ಗ್ರಾಮದ ಜ್ಯೋತಿಸರ ಎಂಬಲ್ಲಿಗೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುವಾಗ ಯೋಗೇಂದ್ರ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಮರದ ದಿಮ್ಮಿ ಅವರ ತಲೆ ಹಾಗೂ ಮೂಗಿಗೆ ಬಲವಾಗಿ ಬಡಿದಿತ್ತು.

ಕೂಡಲೇ ಅವರನ್ನು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ಕರೆ ತಂದಿತ್ತು, ಆದರೆ ಅಷ್ಟರ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ.

ಟಿಂಬರ್‌ ಮಾಲೀಕರ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವಂತೆ ಯೋಗೇಂದ್ರ ಅವರ ಸಹೋದರ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Highcourt: ಜನೌಷಧಿ ಕೇಂದ್ರಗಳ ಸ್ಥಗಿತ: ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ!

You may also like