Himachal Pradesh: ನಾಯಿಗಳೆಂದರೆ ಕೆಲವರಿಗೆ ಪ್ರಾಣ. ಮನೆ ಮಕ್ಕಳಂತೆ ನಾಯಿಗಳನ್ನು ಸಾಕುತ್ತಾರೆ. ಮಾಲೀಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ, ಮನುಷ್ಯನ ಕ್ರಿಯೆಗೆ ಸ್ಪಂದಿಸುವ ಸಾಕು ಪ್ರಾಣಿಗಳಲ್ಲಿ ನಾಯಿಗೆ ಅಗ್ರಸ್ಥಾನವಿದೆ. ಇಂತಹ ನಾಯಿಯೊಂದು ಇದೀಗ ಸುಮಾರು 20 ಕುಟುಂಬಗಳ 67 ಜನರ ಪ್ರಾಣ ಉಳಿಸಿದಂತಹ ಅಚ್ಚರಿ ಘಟನೆ ನಡೆದಿದೆ.
ಹೌದು, ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಭೂಕುಸಿತ, ದಿಢೀರ್ ಪ್ರವಾಹ ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ. ಜನರ ಬದುಕು ಮೂರಾಬಟ್ಟೆಯಾಗಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜೂನ್ 26 ರಂದು ಈ ಘಟನೆ ನಡೆದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅಂದು ನಿರಂತರವಾಗಿ ಭಾರೀ ಮಳೆ ಸುರಿದಿತ್ತು. ಮಳೆಗೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಇದೇ ವೇಳೆ ಭೀಕರ ಭೂಕುಸಿತ ಸಂಭವಿಸುವ ಮುನ್ನ ಸಾಕು ನಾಯಿ ರಾಕಿ ಕೊಟ್ಟ ಎಚ್ಚರಿಕೆಯಿಂದ 63 ಜೀವಗಳು ಬದುಕುಳಿದಿವೆ.
ಈ ಘಟನೆಯ ಕುರಿತಾಗಿ ಸಿಯಾಥಿ ನಿವಾಸಿ ನರೇಂದ್ರ ಎಂಬುವರು ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಮಲಗಿದ್ದ ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಬೊಗಳಲು ಪ್ರಾರಂಭಿಸಿತು ಮತ್ತು ಮಧ್ಯರಾತ್ರಿಯ ಸುಮಾರಿಗೆ ಮಳೆ ಸುರಿಯುತ್ತಲೇ ಇತ್ತು ಎಂದು ಹೇಳಿದ್ದಾರೆ. ಅಲ್ಲದೆ ‘ನಾನು ಬೊಗಳುವಿಕೆಯಿಂದ ಎಚ್ಚರವಾಯಿತು. ನಾನು ಅದರ ಬಳಿಗೆ ಹೋದಾಗ, ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಕಂಡಿತು ಮತ್ತು ನೀರು ಒಳಗೆ ಬರಲು ಪ್ರಾರಂಭಿಸಿತು. ನಾನು ನಾಯಿಯೊಂದಿಗೆ ಕೆಳಗೆ ಓಡಿ ಎಲ್ಲರನ್ನೂ ಎಬ್ಬಿಸಿದೆ’ ಎಂದು ನರೇಂದ್ರ ಹೇಳಿದ್ದಾರೆ. ನಂತರ ನರೇಂದ್ರ ಹಳ್ಳಿಯ ಇತರ ಜನರನ್ನು ಎಬ್ಬಿಸಿ ಸುರಕ್ಷಿತ ಸ್ಥಳಕ್ಕೆ ಓಡುವಂತೆ ಮನವಿ ಮಾಡಿದ್ದಾರೆ.
ಅಲ್ಲದೆ ನಾನಿದ್ದ ಬಹುಮಹಡಿ ಸೇರಿದಂತೆ ನೆರೆ ಹೊರೆಯಲ್ಲಿ 22 ಕುಟುಂಬಗಳಿದ್ದವು. ಎಲ್ಲವು ಬೇರೆಡೆ ತೆರಳಿ ಜೀವ ಉಳಿಸಿಕೊಂಡೆವು. ನಂತರ ಕೆಲವೇ ನಿಮಿಷಗಳಲ್ಲಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿತು. ಸುಮಾರು 12 ಮನೆಗಳು ಉರುಳಿಬಿದ್ದವು. ಕೇವಲ ನಾಲ್ಕು ಮನೆಗಳು ಉಳಿದವು. ಆರೇಳು ಮನೆಗಳು ಸಂಪೂರ್ಣ ಹಾಳಾಗಿವೆ ಎಂದು ಮತ್ತೊಬ್ಬ ನಿವಾಸಿ ಲಲಿತ್ ಮಾಹಿತಿ ನೀಡಿದ್ದಾರೆ.
ಸದ್ಯ ರಾಕಿಗೆ ಕೇಲವ ಎಂಟು ತಿಂಗಳು. ಐದು ತಿಂಗಳು ಇದ್ದಾಗ ಮಂಡಿಯ ಸ್ಯಾಂಡ್‌ಹೋಲ್‌ನಲ್ಲಿರುವ ತನ್ನ ಸಹೋದರನಿಂದ ತೆಗೆದುಕೊಂಡು ಬಂದಿದ್ದೆ. ರಾಕಿ ಇಲ್ಲಿಗೆ ಬಂದು ಮೂರು ತಿಂಗಳಾಯಿತು. ನಿವಾಸಿಗಳನ್ನು ಕೂಗಿ ಎಬ್ಬಿಸಿದಾಗ ಎಲ್ಲ ಹೊರ ನಡೆದರು. ನಂತರ ರಾಕಿ ಸಿಲುಕದಂತೆ ಅವನನ್ನು ರಕ್ಷಿಸಿ ಹೊರತಂದೆವು ಎಂದು ಲಲಿತ್ ಹೇಳಿಕೊಂಡಿದ್ದಾರೆ. ಎಲ್ಲರು ಇದು ಅದೃಷ್ಟದ ನಾಯಿ ಎಂದು ನಾಯಿ ನಿಯತ್ತು, ಸಮಯೋಚಿತ ನಡೆಯನ್ನು ಮೆಚ್ಚಿಕೊಂಡಿದ್ದಾರೆ.
