Bangalore: ಬೆಂಗಳೂರಿನ ಬನಶಂಕರಿಯಲ್ಲಿ ಮರದ ಕೊಂಬೆ ಬಿದ್ದು ಅಕ್ಷಯ್ ಎನ್ನುವ ಯುವಕ ಇತ್ತೀಚೆಗಷ್ಟೇ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡಿ ಪ್ರಾಣ ಬಿಟ್ಟಿದ್ದ ಘಟನೆ ಮಾಸುವ ಮುನ್ನವೇ ಅವರ ಕುಟುಂಬಕ್ಕೆ ಇನ್ನೊಂದು ಶೋಕ ಎದುರಾಗಿದೆ. ಮಗನ ನೆನಪಿನಲ್ಲಿಯೇ ಕೊರಗುತ್ತಿದ್ದ ಆತನ ತಂದೆ ಕೂಡಾ ಸಾವು ಕಂಡಿದ್ದಾರೆ.
ಶಿವರಾಮ್ ಮಂಗಳವಾರ ಸಾವಿಗೀಡಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿರುವ ಕುರಿತು ವರದಿಯಾಗಿದೆ. ಡಯಾಲಿಸಿಸ್ ಪೇಷೆಂಟ್ ಆಗಿದ್ದ ಶಿವರಾಮ್ ಅವರ ಚಿಕಿತ್ಸೆ ಅಕ್ಷಯ್ ದುಡಿಮೆಯಲ್ಲಿಯೇ ನಡೆಯುತಿತ್ತು. ಆದರೆ ಪುತ್ರನ ಅಗಲುವಿಕೆ ನಂತರ ಅವರು ಇನ್ನಷ್ಟು ಕುಗ್ಗಿ ಹೋಗಿದ್ದು, ಹಾಸಿಗೆ ಹಿಡಿದಿದ್ದರು.
ಜೂನ್ 15 ರಂದು ಅಪ್ಪನಿಗೆ ಮಟನ್ ಇಷ್ಟ ಎನ್ನುವ ಕಾರಣಕ್ಕೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹೊರಗಡೆ ಹೋಗಿದ್ದಾಗ, ಬನಶಂಕರಿಯ ಬ್ರಹ್ನ ಮಂದಿರದ ಬಳಿ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿತ್ತು. ಜೂನ್ 19 ರ ಮಧ್ಯಾಹ್ನ 1 ಗಂಟೆಗೆ ಅಕ್ಷಯ್ ಸಾವಿಗೀಡಾಗಿದ್ದರು. ಅಕ್ಷಯ್ ಕಣ್ಣುಗಳನ್ನು ದಾನ ಮಾಡಲಾಗಿತ್ತು.
ಇದನ್ನೂ ಓದಿ: Mangalore: ಕಾಪು ಮಾರಿಗುಡಿ ಕ್ಷೇತ್ರಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್!
