Chaitra Kundapura: ಕೆಲ ತಿಂಗಳ ಹಿಂದೆ ಮದುವೆಯಾಗಿ ಭಾರೀ ಸದ್ದು ಮಾಡಿದ್ದ ಚೈತ್ರಾ ಕುಂದಾಪುರ ಅವರು ಇದೀಗ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕೋಪಗೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕುರಿತು ಹಾಕಿರುವ ಸುದ್ದಿ ಸುಳ್ಳು ಎಂದು ಹೇಳಿರುವ ಚೈತ್ರಾ, ಕ್ಲಿಕ್ ಬೈಟ್‌ಗಾಗಿ ಈ ರೀತಿಯ ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ.
ಮದುವೆಯಾದ ಕೆಲವೇ ತಿಂಗಳಲ್ಲಿ ಕನ್ನಡಿಗರಿಗೆ ಸಿಹಿ ಸುದ್ದಿ ಕೊಟ್ಟ ರೆಬಲ್ ಚೈತ್ರಾ ಕುಂದಾಪುರ, ಫಿದಾ ಆದ ಕರ್ನಾಟಕ ಎನ್ನುವ ಶೀರ್ಷಿಕೆಯ ಸುದ್ದಿ ವೈರಲ್ ಆಗಿತ್ತು. ಇದರ ಸ್ಕ್ರೀನ್ ಶಾಟ್ ತೆಗೆದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಚೈತ್ರಾ ಇದು ಫೇಕ್ ಸುದ್ದಿ, ಕ್ಲಿಕ್ ಬೈಟ್ ಆಸೆಗೆ ಕಂಡವರ ಮನೆಯ ಖಾಸಗಿ ವಿಷಯಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಇಂತಹ ಲೋ ಕ್ಲಾಸ್ ವೆಬ್‌ನ್ಯೂಸ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಬರಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಹರಡಿಸುವ ಸುದ್ದಿಗಳು ನಮ್ಮ ಮತ್ತು ನಮ್ಮ ಕುಟುಂಬದವರ ಮೇಲೆ ಎಂತಹ ಪರಿಣಾಮ ಬೀರಬಹುದು ಎನ್ನುವ ಚಿಕ್ಕ ಕಲ್ಪನೆ ಕೂಡಾ ಇವರಿಗಿಲ್ಲ. ಮುಖ ತೋರಿಸದೆ ಸುಳ್ಳು ಸುದ್ದಿ ಹಬ್ಬಿಸುವ ಯೂಟ್ಯೂಬ್ ಚಾನೆಲ್‌ಗಳಿಗೆ ಕಡಿವಾಣ ಹಾಕಲು ಸ್ವತಃ ಯೂಟ್ಯೂಬ್ ಮುಂದಾಗಿತ್ತು. ವ್ಯವಸ್ಥೆ ಈ ದಿಕ್ಕಿನಲ್ಲಿ ಯೋಚಿಸಬೇಕಿದೆ ಎಂದು ಶೀರ್ಷಿಕೆ ಹಾಕಿದ್ದಾರೆ ಚೈತ್ರಾ ಕುಂದಾಪುರ.
ಇದನ್ನೂ ಓದಿ: Lucknow: ಅಸಹ್ಯ ವಿಡಿಯೋ, ಕೆಟ್ಟ ಸಂಭಾಷಣೆ: ಇಬ್ಬರು ಯುವತಿಯರ ವಿರುದ್ಧ ಕೇಸ್
