Kerala: ಮೂರು ತಿಂಗಳ ಹಿಂದೆ ಕಾಗೆಯೊಂದು ಹೊತ್ತೊಯ್ದಿದ್ದ ಚಿನ್ನದ ಬಳೆ ಇದೀಗ ಮತ್ತೆ ಮರಳಿ ಒಡತಿಯ ಕೈ ಸೇರಿದ ಬಲು ವಿಚಿತ್ರ ಹಾಗೂ ಅಪರೂಪದ ಘಟನೆ ಒಂದು ನಡೆದಿದೆ. ಇದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮ್ಯಾಟರ್.
ಕೇರಳದ ಮಲಪ್ಪುರಂನ ತ್ರಿಕ್ಕಲಂಗೋಡ್ ನಲ್ಲಿ ರುಕ್ಮಿಣಿ ಎಂಬ ಮಹಿಳೆ ಮನೆಯ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ತಮ್ಮ 12 ಗ್ರಾಂ ತೂಕದ ಬಳೆಯನ್ನು ಕೈಯಿಂದ ತೆಗೆದು ಮನೆಯ ಹೊರಗಿನ ಗೋಡೆಯ ಮೇಲೆ ಇರಿಸಿ ಮನೆ ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಕಾಗೆಯೊಂದು ಆ ಬಳೆಯನ್ನು ಹೊತ್ತೊಯ್ದಿದೆ. ಬಳಿಕ ಕಾಗೆ ಬಳೆಯನ್ನು ತೆಗೆದುಕೊಂಡು ಹೋಗಿದೆ ಎಂದು ತಿಳಿದಾಗ ಎಲ್ಲಾದರೂ ಅಕ್ಕಪಕ್ಕದಲ್ಲಿ ಹಾಕಿರಬಹುದು ಎಂದು ಸುತ್ತಲೂ ಹುಡುಕಿದ್ದಾರೆ. ಆದರೆ ಎಲ್ಲಿಯೂ ಬಳೆ ಪತ್ತೆಯಾಗಿಲ್ಲ. ಇದರಿಂದ ನಿರಾಶರಾದ ಮನೆಯವರು ಹುಡುಕಾಟದ ಪ್ರಯತ್ನವನ್ನು ಕೈ ಚೆಲ್ಲಿದ್ದಾರೆ.
ಮೂರು ತಿಂಗಳ ನಂತ್ರ ರುಕ್ಮಿಣಿಯ ಮನೆಯಿಂದ ಇವತ್ತು ಮೀಟರ್ ದೂರದಲ್ಲಿರುವ ಅನ್ವರ್ ಸಾದತ್ ಎಂಬಾತ ತಮ್ಮ ಮನೆಯ ಬಳಿಯ ಮಾವಿನ ಮರದಲ್ಲಿ ಮಗಳಿಗೆ ಹಣ್ಣು ಕೀಳಲು ಮರ ಅಲುಗಾಡಿಸುವಾಗ ಆ ವೇಳೆ ಹೊಳೆಯುತ್ತಿದ್ದಂತ ವಸ್ತುವೊಂದು ಕೆಳಗೆ ಬಿದ್ದಿತ್ತು. ಅದನ್ನು ಪುತ್ರಿ ಫಾತಿಮಾ ಹುದಾ ಗಮನಿಸಿದ್ದರು. ಆ ಬಳಿಕ ಅದನ್ನು ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಚಿನ್ನವೆಂಬುದು ಗೊತ್ತಾಗಿದೆ.
ಅನ್ವರ್ ಸಾದತ್ ಮರದಲ್ಲಿ ಸಿಕ್ಕಂತ ತುಂಡಾಗಿದ್ದಂತ ಚಿನ್ನದ ಬಳೆಯನ್ನು ಊರಿನ ಲೈಬ್ರರಿಗೆ ಹೋಗಿ ಕೊಟ್ಟು ಪ್ರಾಮಾಣಿಕತೆ ಮರೆದಿದ್ದರು. ಅಲ್ಲದೇ ಮಾಲೀಕರು ಯಾರೆಂದು ತಿಳಿದು ಹಿಂದಿರುಗಿಸಲು ಮನವಿ ಮಾಡಿದ್ದರು. ಸುದ್ದಿ ಊರಲ್ಲಿ ಹಬ್ಬಿದ ನಂತ್ರ ರುಕ್ಮಿಣಿ ಲೈಬ್ರರಿಗೆ ತೆರಳಿ ಬಳೆ ತನ್ನದೇ ಎಂದು ಖಚಿತಪಡಿಸಿಕೊಂಡು, ಕಳೆದು ಹೋಗಿದ್ದಂತ ಬಳೆ ನೋಡಿ ಖುಷಿಯಾಗಿ, ಖಚಿತ ಮಾಹಿತಿ ನೀಡಿ ಪಡೆದುಕೊಂಡಿದ್ದಾರೆ. ಈ ಮೂಲಕ ಮೂರು ತಿಂಗಳ ಕಾಗೆ ಹೊತ್ತೊಯ್ದಿದ್ದಂತ ಚಿನ್ನದ ಬಳೆ ಒಡತಿ ರುಕ್ಮಿಣಿಯ ಕೈಸೇರಿದೆ.
ಇದನ್ನೂ ಓದಿ:UP: ಹೆಂಡತಿಯ ಕಿರುಕುಳ – ಬಿಳಿ ಪ್ಯಾಂಟ್ ಮೇಲೆ ಡೆತ್ ನೋಟ್ ಬರೆದಿಟ್ಟು ಪ್ರಾಣಬಿಟ್ಟ ಗಂಡ !!
