Home » Tamilnadu: ನೆಗಡಿ ಕೆಮ್ಮಿತ್ತು ಎಂದು 8 ತಿಂಗಳ ಮಗುವಿಗೆ ವಿಕ್ಸ್‌, ಕರ್ಪೂರ ಹಚ್ಚಿದ ಪೋಷಕರು: ಮಗು ಸಾವು

Tamilnadu: ನೆಗಡಿ ಕೆಮ್ಮಿತ್ತು ಎಂದು 8 ತಿಂಗಳ ಮಗುವಿಗೆ ವಿಕ್ಸ್‌, ಕರ್ಪೂರ ಹಚ್ಚಿದ ಪೋಷಕರು: ಮಗು ಸಾವು

by V R
0 comments
Baby Alive before Cremation

Tamilnadu: ಮಗುವಿಗೆ ನೆಗಡಿಯಾಗಿದೆ ಎಂದು ಪೋಷಕರು ವಿಕ್ಸ್‌ ಹಚ್ಚಿದ ಪರಿಣಾಮ 8 ತಿಂಗಳ ಶಿಶು ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಚೆನ್ನೈನ ಅಬಿರಾಮಪುರಂ ಪ್ರದೇಶದಲ್ಲಿ ನಡೆದಿದೆ. ನೆಗಡಿ ಕೆಮ್ಮು ಇತ್ತು ಎಂದು ಪೋಷಕರು ಮಗುವಿಗೆ ಮೂಗಿಗೆ ಮತ್ತು ಗಂಟಲಿಗೆ ವಿಕ್ಸ್‌ ಹಚ್ಚಿದ್ದಾರೆ ಇದರಿಂದ ಉಸಿರಿನ ತೊಂದರೆಯುಂಟಾಗಿ ಮಗು ಸಾವಿಗೀಡಾಗಿದೆ.

ಅಬಿರಾಮಪುರಂ ನಿವಾಸಿ ರಾಧಾಕೃಷ್ಣನ್‌ ಪುರಂ ದೇವನಾಥನ್‌ ಅವರಿಗೆ 8 ತಿಂಗಳ ಹೆಣ್ಣು ಮಗು ಇದ್ದು, ಶೀತ ಕೆಮ್ಮಿನಿಂದ ಬಳಲುತ್ತಿತ್ತು. ಜುಲೈ 13 ರ ಸಂಜೆ ದೇವನಾಥನ್‌ ಮತ್ತು ಅವರ ಕುಟುಂಬ ಸದಸ್ಯರು ಮೂಗಿಗೆ ವಿಕ್ಸ್‌ ಮತ್ತು ಕರ್ಪೂರವನ್ನು ಹಚ್ಚಿದ್ದು, ಸ್ವಲ್ಪ ಹೊತ್ತಿನಲ್ಲಿ ಮಗುವಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.

ಮಗುವನ್ನು ಕೂಡಲೇ ಎಗ್ಮೋರ್‌ ಸರಕಾರಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ನೀಡಲಾಯಿತಾದರೂ ಬದುಕುಳಿಯಲಿಲ್ಲ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಗು ಸಾವಿಗೀಡಾಗಿದೆ. ಶವಪರೀಕ್ಷೆಯ ವರದಿಯ ನಂತರ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸದಿದ್ದಾರೆ.

ಇದನ್ನೂ ಓದಿ: Govt Employees: ವೇತನ ಹೆಚ್ಚಳಕ್ಕೆ ಸರ್ಕಾರದ ಮೀನಾಮೇಷ – ರಾಜ್ಯ ಸರ್ಕಾರಿ ಬಸ್ ನೌಕರರಿಂದ ಮುಷ್ಕರ ಸಾಧ್ಯತೆ

You may also like