2
Panjab: ಎಲ್ಲೆಂದರಲ್ಲಿ ವಯಸ್ಕರೊಂದಿಗೆ ಸೇರಿ ಭಿಕ್ಷೆ ಬೇಡುವ ಮಕ್ಕಳ ಡಿಎನ್ಎ ಪರೀಕ್ಷೆಗೆ ಪಂಜಾಬ್ ಸರ್ಕಾರವು ಆದೇಶ ನೀಡಿದೆ. ಅಷ್ಟೇ ಅಲ್ಲದೆ ಪರೀಕ್ಷೆಯ ಬಳಿಕ ವಯಸ್ಕರ ಮತ್ತು ಮಕ್ಕಳ ನಡುವಿನ ಸಂಬಂಧ ಏನು ಎಂಬುದನ್ನು ವರದಿ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಮಕ್ಕಳ ಕಳ್ಳಸಾಗಾಣಿಕೆ ಮತ್ತು ಶೋಷಣೆ ತಡೆಯುವ ಉದ್ದೇಶದಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಡಿಎನ್‌ಎ ಪರೀಕ್ಷೆ ಫಲಿತಾಂಶ ಲಭ್ಯವಾಗುವವರೆಗೆ ಮಗುವನ್ನು ಮಕ್ಕಳ ಕಾಳಜಿ ಕೇಂದ್ರದಲ್ಲಿ ಇರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಯಸ್ಕ ವ್ಯಕ್ತಿಗೂ ಮಗುವಿಗೂ ಯಾವುದೇ ಸಂಬಂಧ ಇಲ್ಲದಿರುವುದು ಪತ್ತೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಇದನ್ನೂ ಓದಿ: Suicide: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ!
