Ragi Idli: ಭಾರತದ ಸಂಸತ್ ಸದಸ್ಯರಿಗೆ ಹೊಸ ಊಟದ ಮೆನುವನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ರಾಗಿ ಇಡ್ಲಿಯನ್ನು ಸೇರಿಸಲಾಗಿದೆ. ಇದರೊಂದಿಗೆ ಜೋಳದ ಉಪ್ಮಾದಿಂದ ಹಿಡಿದು ಹೆಸರುಕಾಳು ಚಿಲ್ಲಾ ಮತ್ತು ತರಕಾರಿಗಳೊಂದಿಗೆ ಬೇಯಿಸಿದ ಮೀನುಗಳವರೆಗೆ, ಸಂಸತ್ತಿನ ಹೊಸ ಮೆನು ಸಖತ್ ವೈರಲ್ ಆಗುತ್ತಿದೆ.
ಆರೋಗ್ಯದ ದೃಷ್ಟಿಯಲ್ಲಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಆಹಾರದ ಮೆನುವಿನಲ್ಲಿ ಬದಲಾವಣೆಯನ್ನು ತಂದಿದ್ದಾರೆ. ಸಂಸತ್ತಿನ ಕ್ಯಾಂಟೀನ್ ಅಧಿಕಾರದ ಕಾರಿಡಾರ್‌ಗಳಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಪೌಷ್ಠಿಕಾಂಶದೊಂದಿಗೆ ಸಂಪ್ರದಾಯವನ್ನು ಸಂಯೋಜಿಸುವ ಈ ವಿಶೇಷ ಮೆನುವನ್ನು ಸಿದ್ದಪಡಿಸಲಾಗಿದೆ.
ಇನ್ನು ರುಚಿಕರವಾದ ಮೇಲೋಗರಗಳು, ಥಾಲಿ ಸಿರಿಧಾನ್ಯ ಆಧಾರಿತ ಊಟಗಳು, ನಾರಿನ ಸಮೃದ್ಧ ಸಲಾಡ್‌ಗಳು ಮತ್ತು ಪೋಟೀನ್ ಯುಕ್ತ ಸೂಪ್‌ಗಳು ಸಹ ಲಭ್ಯವಿವೆ. ಪ್ರತಿಯೊಂದು ಖಾದ್ಯದ ಕಾರ್ಬೋಹೈಡ್ರೈಟ್‌ಗಳು, ಸೋಡಿಯಂ ಮತ್ತು ಕ್ಯಾಲೋರಿಗಳು ಕಡಿಮೆ ಇರುವಂತೆ ಮತ್ತು ಅಗತ್ಯ ಪೋಷಕಾಂಶಗಳು ಹೆಚ್ಚಿರುವಂತೆ ಎಚ್ಚರಿಕೆಯಿಂದ ತಯಾರಿಸಲಾಗಿದೆ. ಇದಲ್ಲದೆ, ಆರೋಗ್ಯ ಮೆನುವಿನಲ್ಲಿ ಭಕ್ಷ್ಯಗಳ ಹೆಸರುಗಳ ಪಕ್ಕದಲ್ಲಿ ಕ್ಯಾಲೊರಿಗಳ ಸಂಖ್ಯೆ ಕೂಡ ನಮೂದಿಸಲಾಗಿದೆ.
ರಾಗಿ ಇಡ್ಲಿಗೆ ಬೇಕಾಗುವ ಸಾಮಗ್ರಿಗಳು
270 ಕೆಸಿಎಲ್ ಹೊಂದಿರುವ ರಾಗಿ ಇಡ್ಲಿ ಹೊಟ್ಟೆಗೆ ತುಂಬಾ ಹಗುರವಾದ ಉಪಹಾರ. ಇದನ್ನು ತಿಂದ ನಂತರ ನಿಮಗೆ ಖಾಲಿ ಹೊಟ್ಟೆ ಅನಿಸುವುದಿಲ್ಲ. ರಾಗಿ ಇಡ್ಲಿ ಮಾಡಲು ಯಾವ ಪದಾರ್ಥಗಳು ಬೇಕಾಗುತ್ತವೆ ಎಂದು ತಿಳಿಯಿರಿ.
1/2 ಕಪ್ ರಾಗಿ
1/2 ಕಪ್ ಸಣ್ಣ ಧಾನ್ಯ ಅಕ್ಕಿ
1/2 ಕಪ್ ಹೆಸರು ಬೇಳೆ
2 ರಿಂದ 3 ಚಮಚ ಮೊಸರು
ಸ್ವಲ್ಪ ಉಪ್ಪು
1 ಟೀಸ್ಪೂನ್ ಬೇಕಿಂಗ್ ಸೋಡಾ
ರಾಗಿ ಇಡ್ಲಿ ಮಾಡುವುದು ಹೇಗೆ
ರಾಗಿ ಇಡ್ಲಿ ತಯಾರಿಸಲು, ಮೊದಲು ಅಕ್ಕಿ, ಹೆಸರು ಬೇಳೆ ಮತ್ತು ರಾಗಿಯನ್ನು ರಾತ್ರಿಯಿಡೀ ನೆನೆಸಿಡಿ. ನಂತರ ಅದನ್ನು ಮಿಕ್ಸರ್ ಗ್ರೈಂಡರ್ ಜಾರ್‌ನಲ್ಲಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಈಗ ನೀವು ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಬೇಕು ಮತ್ತು ಎರಡರಿಂದ ಮೂರು ಚಮಚ ಮೊಸರು ಕೂಡ ಸೇರಿಸಬೇಕು. ನಿಮ್ಮ ಬಳಿ ಅಡುಗೆ ಸೋಡಾ ಇಲ್ಲದಿದ್ದರೆ, ಒಂದು ಟೀ ಚಮಚ ಈನೋವನ್ನು ಸೇರಿಸಬಹುದು. ಇಡ್ಲಿ ಅಚ್ಚಿಗೆ ಎಣ್ಣೆ ಹಚ್ಚಿ ಸುಮಾರು 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ರುಚಿಕರವಾದ ಫೈಬರ್ ಭರಿತ ರಾಗಿ ಇಡ್ಲಿ ಸಿದ್ಧವಾಗುತ್ತೆ.
ಇದನ್ನೂ ಓದಿ: Crime: 1ನೇ ಕ್ಲಾಸ್ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿರುವ ಶಿಕ್ಷಕಿ!
